ಸರ್ಕಾರಿ ಕೆಲಸ ಸಿಗದಿದ್ದಕ್ಕಾಗಿ ಮನನೊಂದು ಯುವಕ ಆತ್ಮಹತ್ಯೆ

A Person Commit to Suicide due to not get  Govt Job
Highlights

ಸರ್ಕಾರಿ ಕೆಲಸ ಸಿಗದೇ ಇದ್ದದ್ದಕ್ಕೆ ಮನನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಲ್ಲಿನ ಯಳಂದೂರು ತಾಲೂಕಿನ ಚಾಮಲಪುರದಲ್ಲಿ ಘಟನೆ ನಡೆದಿದೆ.  ಮಧು (30) ಆತ್ಮಹತ್ಯೆ ಮಾಡಿಕೊಂಡ ಯುವಕ.

ಚಾಮರಾಜನಗರ (ಮಾ. 05):  ಸರ್ಕಾರಿ ಕೆಲಸ ಸಿಗದೇ ಇದ್ದದ್ದಕ್ಕೆ ಮನನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಲ್ಲಿನ ಯಳಂದೂರು ತಾಲೂಕಿನ ಚಾಮಲಪುರದಲ್ಲಿ ಘಟನೆ ನಡೆದಿದೆ.  ಮಧು (30) ಆತ್ಮಹತ್ಯೆ ಮಾಡಿಕೊಂಡ ಯುವಕ.

ಸರ್ಕಾರಿ ಕೆಲಸ ಕೊಡಿಸುವುದಾಗಿ ಮಧು ಬಳಿ  ಚಾಮಣ್ಣ ಮತ್ತು ಶಶಿಧರ್ ಎಂಬುವವರು ಹಣ ಪಡೆದಿದ್ದರು.  ವರ್ಷ ಕಳೆದರೂ ಕೆಲಸ ಕೊಡಿಸದೇ ಇದ್ದುದರಿಂದ  ಸರ್ಕಾರಿ ಕೆಲಸ ಸಿಗದ ಖಿನ್ನತೆಯಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆ ಮಧು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

loader