Asianet Suvarna News Asianet Suvarna News

ನ್ಯಾಯಾಲಯಕ್ಕೆ ನಕಲಿ ಜಾಮೀನು ನೀಡಿದ್ದವ ಸೆರೆ

ಕತ್ರಿಗುಪ್ಪೆಯ ನವೀನ್‌ ಕುಮಾರ್‌(29) ಬಂಧಿತ. ಮಂಡ್ಯ ಮೂಲದ ಆರೋಪಿ ನವೀನ್‌ ವಿರುದ್ಧ ಸೋಲದೇವನಹಳ್ಳಿ, ಬಸವನಗುಡಿ, ಮಲ್ಲೇಶ್ವರಂ, ವಿಜಯನಗರ, ರಾಜಾಜಿನಗರ ಸೇರಿದಂತೆ ಹಲವು ಠಾಣೆಗಳಲ್ಲಿ 25ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ.

A Person Arrested for Fake Bail Case
Author
Bengaluru, First Published Oct 11, 2018, 8:50 AM IST
  • Facebook
  • Twitter
  • Whatsapp

ಬೆಂಗಳೂರು[ಅ.11]: ನಕಲಿ ಜಾಮೀನು ನೀಡಿ ನ್ಯಾಯಾಲಯಕ್ಕೆ ವಂಚಿಸಿದ್ದ ವಂಚಕನನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕತ್ರಿಗುಪ್ಪೆಯ ನವೀನ್‌ ಕುಮಾರ್‌(29) ಬಂಧಿತ. ಮಂಡ್ಯ ಮೂಲದ ಆರೋಪಿ ನವೀನ್‌ ವಿರುದ್ಧ ಸೋಲದೇವನಹಳ್ಳಿ, ಬಸವನಗುಡಿ, ಮಲ್ಲೇಶ್ವರಂ, ವಿಜಯನಗರ, ರಾಜಾಜಿನಗರ ಸೇರಿದಂತೆ ಹಲವು ಠಾಣೆಗಳಲ್ಲಿ 25ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ.

ಆರೋಪಿ ಈ ಎಲ್ಲಾ ಪ್ರಕರಣಗಳಲ್ಲಿ ನಕಲಿ ಜಾಮೀನು ನೀಡಿ ಬಿಡುಗಡೆ ಹೊಂದುತ್ತಿದ್ದ. ಈತ ದಾಸನಪುರ ಆಲೂರಿನಲ್ಲಿರುವ ಹೆಗ್ಗಡದೇವನಪುರದ ನಿವಾಸಿ ಎಚ್‌.ಆರ್‌.ಬೈರೇಗೌಡ ಅವರಿಗೆ ಸೇರಿದ 17.5 ಗುಂಟೆ ಜಮೀನಿನ ಪಹಣಿ ಮತ್ತು ಮ್ಯುಟೇಷನ್‌ ಪ್ರತಿಗಳನ್ನು ಕಂದಾಯ ಇಲಾಖೆಯಿಂದ ಪಡೆದುಕೊಂಡಿದ್ದ. ಬೈರೇಗೌಡ ಹೆಸರಿನಲ್ಲಿ ನಕಲಿ ಓಟರ್‌ ಐಡಿ ಕಾರ್ಡ್‌ಗಳನ್ನು ಸೃಷ್ಟಿಸಿ, ಐಡಿ ಕಾರ್ಡ್‌ಗೆ ತನ್ನ ಭಾವಚಿತ್ರ ಹಾಕಿಕೊಂಡು ಜಮೀನು ತನ್ನದೆಂದು ನಂಬಿಸಿದ್ದ. ಈ ಮೂಲಕ ಜಾಮೀನು ಪಡೆದುಕೊಳ್ಳುತ್ತಿದ್ದ. ಮೈಸೂರಿನ ರಾಜಣ್ಣ ಎಂಬುವವರೊಂದಿಗೆ ಸೇರಿಕೊಂಡು ವಕೀಲರೊಬ್ಬರ ನೆರವಿನೊಂದಿಗೆ ಅಪರಾಧ ಪ್ರಕರಣಗಳಲ್ಲಿ ನಕಲಿ ದಾಖಲೆ ನೀಡಿ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶ್ಯೂರಿಟಿ ನೀಡಿ ಜಾಮೀನು ಸಿಗುವಂತೆ ಮಾಡುತ್ತಿದ್ದ.

ಸಿಕ್ಕಿ ಬಿದ್ದಿದ್ದು ಹೇಗೆ?

ಅವಧಿಗೂ ಮೀರಿ ನಗರದಲ್ಲಿ ನೆಲೆಸಿದ್ದ ನೈಜೀರಿಯಾ ಮೂಲದ ಮೈಕಲ್‌ ಟೋನಿ ಎಂಬಾತನಿಗೆ ಆರೋಪಿ ಜಾಮೀನು ನೀಡಿದ್ದ. ಜೈಲಿನಿಂದ ಹೊರ ಬಂದ ನಂತರ ನ್ಯಾಯಾಲಯಕ್ಕೆ ಆರೋಪಿ ಹಾಜರಾಗಿರಲಿಲ್ಲ. ಶ್ಯೂರಿಟಿದಾರ ಎಚ್‌.ಎಸ್‌ ಬೈರೇಗೌಡ ಅವರನ್ನು ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಿದಾಗ ತಾನು ಶ್ಯೂರಿಟಿ ನೀಡಲಿಲ್ಲವೆಂದು ತಿಳಿಸಿದ್ದರು. ಆ ವೇಳೆ ಬೈರೇಗೌಡ ಅವರ ಜಮೀನಿನ ಹೆಸರಿನಲ್ಲಿ ನಕಲಿ ದಾಖಲೆ ನೀಡಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಕೊತ್ತನೂರು ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.

Follow Us:
Download App:
  • android
  • ios