ಹಾಸನ[ಮಾ.30]: ‘ನಿಂಬೆ ಹಣ್ಣು ಹಿಡ್ಕೊಂಡು ಐಟಿ ದಾಳಿ ನಡೆಯೋದನ್ನು ತಪ್ಪಿಸೋಕೆ ಸಾಧ್ಯವಾಯ್ತ’ ಎಂದು ಸಚಿವ ಎಚ್‌.ಡಿ.ರೇವಣ್ಣಗೆ ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಪರೋಕ್ಷ ಟಾಂಗ್‌ ನೀಡಿದ್ದಾರೆ.

ಶುಕ್ರವಾರ ನಗರದ ತಮ್ಮ ನಿವಾಸದಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಪೂಜೆ ಮಾಡೋದು ಮನಃಶಾಂತಿಗಾಗಿಯೇ ಹೊರತು ಬೇರೆ ಯಾವ ಉದ್ದೇಶದಿಂದ ಅಲ್ಲ ಎಂದಿದ್ದಾರೆ.

ಅಲ್ಲದೇ ನಿಂಬೆ ಹಣ್ಣಿನಿಂದಲೇ ಎಲ್ಲವೂ ಆಗುವುದಾಗಿದ್ದರೆ ಯುದ್ಧ ವಿಮಾನ ಏಕೆ ಬೇಕಿತ್ತು ಎಂದು ರೇವಣ್ಣರ ಹೆಸರನ್ನು ಪ್ರಸ್ತಾಪಿಸದೇ ಮಂಜು ಟೀಕಿಸಿದರು.