ಗಂಡ-ಹಂಡಿರ ಬೆಡ್’ರೂಮ್ ವಿಡಿಯೋ ಮಾಡಿದ ಭೂಪ!

A guy record husband and wife bedroom video in belagavi
Highlights

ಯುವಕನೊಬ್ಬ ಗಂಡ ಹೆಂಡತಿ  ಬೆಡ್ ರೂಮ್ ವಿಡಿಯೋ ಮಾಡಿದ ಘಟನೆ  ಪೀರನವಾಡಿ ಗ್ರಾಮದಲ್ಲಿ ನಡೆದಿದೆ.  ಪೀರನವಾಡಿಯ ಬಾಡಿಗೆ ಮನೆಯಲ್ಲಿ  ಪರುಶರಾಮ್ ಸಿಂಧೆ, ಪತ್ನಿ ಅನಿತಾ ಸಿಂಧೆ ವಾಸವಾಗಿದ್ದರು.

ಬೆಳಗಾವಿ (ಜೂ. 03): ಯುವಕನೊಬ್ಬ ಗಂಡ ಹೆಂಡತಿ  ಬೆಡ್ ರೂಮ್ ವಿಡಿಯೋ ಮಾಡಿದ ಘಟನೆ  ಪೀರನವಾಡಿ ಗ್ರಾಮದಲ್ಲಿ ನಡೆದಿದೆ. 

ಪೀರನವಾಡಿಯ ಬಾಡಿಗೆ ಮನೆಯಲ್ಲಿ  ಪರುಶರಾಮ್ ಸಿಂಧೆ, ಪತ್ನಿ ಅನಿತಾ ಸಿಂಧೆ ವಾಸವಾಗಿದ್ದರು. ಒಂದು ತಿಂಗಳ ಹಿಂದೆ ಇವರಿಬ್ಬರ ಮದುವೆಯಾಗಿತ್ತು. ಪಕ್ಕದ ಮನೆಯ ನಿವಾಸಿ ಸುನೀಲ್ ವಡ್ಡರ ಎಂಬಾತ ಮನೆಯ ಕಿಟಕಿಯಲ್ಲಿ ಮೊಬೈಲ್ ಇಟ್ಟು ಶೂಟಿಂಗ್ ಮಾಡುತ್ತಿದ್ದ. ‌ ನಿನ್ನೆ ಸಪ್ಪಳವಾಗಿದ್ದನ್ನ ಗಮನಿಸಿ ಪರಶುರಾಮ್ ನೋಡಿದಾಗ ಮೊಬೈಲ್ ಇಟ್ಟಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಸುನೀಲ್ ತನ್ನ ಮೊಬೈಲ್ ನೀಡುವಂತೆ ಪರುಶರಾಮ್ ಗೆ ಕೇಳಿದ್ದಾನೆ. ಆದ್ರೆ ಸಂಶಯಗೊಂಡು ಪರುಶರಾಮ್ ಸುನೀಲ್ ಗೆ ಮೊಬೈಲ್ ಮರಳಿ ನೀಡಿಲ್ಲ.

ಇದೀಗ ಪರುಶರಾಮ್ ದಂಪತಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

loader