Asianet Suvarna News Asianet Suvarna News

ಅಕ್ಕಸಾಲಿಗನ ಕೈಚಳಕ: ಚಿನ್ನದಲ್ಲಿ ಅರಳಿದ ಹಂಪಿ ರಥ

ಹಂಪಿಯ ವಿಜಯ ವಿಠ್ಠಲ ದೇಗುಲದ ಸನ್ನಿಧಿಯಲ್ಲಿರುವ ಐತಿಹಾಸಿಕ ಪ್ರಸಿದ್ಧ ರಥವನ್ನು ಈಗ ಕಾರವಾರದಲ್ಲಿ ಕಾಣಬಹುದು. 

A Famouse Hampi chariot Carved by Karwar Goldsmith
Author
Bengaluru, First Published Oct 11, 2018, 11:52 AM IST
  • Facebook
  • Twitter
  • Whatsapp

ಕಾರವಾರ, ಅ,.11:  ಹಂಪಿಯ ವಿಜಯ ವಿಠ್ಠಲ ದೇಗುಲದ ಸನ್ನಿಧಿಯಲ್ಲಿರುವ ಐತಿಹಾಸಿಕ ಪ್ರಸಿದ್ಧ ರಥವನ್ನು ಈಗ ಕಾರವಾರದಲ್ಲಿ ಕಾಣಬಹುದು. ಇದು ಅಂತಿಂಥ ರಥವಲ್ಲ. ಚಿನ್ನದಲ್ಲಿ ಮಾಡಿದ ಚಿತ್ತಾಕರ್ಷಕ ರಥ. 

ಹೌದು.. ಇಲ್ಲಿನ ಕಡವಾಡದ ಅಕ್ಕಸಾಲಿಗ ಮಿಲಿಂದ ಅಣ್ವೇಕರ್‌ ಪ್ರತಿವರ್ಷವೂ ಒಂದಿಲ್ಲೊಂದು ಕಲಾಕೃತಿ ಸೃಷ್ಟಿಸುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಈ ಬಾರಿ .36 ಸಾವಿರ ಮೌಲ್ಯದ 12 ಗ್ರಾಂ ಬಂಗಾರದಿಂದ 1 ಇಂಚು ಎತ್ತರದ ಹಂಪಿ ರಥವನ್ನು ತಯಾರಿಸಿದ್ದಾರೆ. 

ಮುಂಭಾಗದಲ್ಲಿ ರಥದ ಒಳಗೆ ಆಸೀನನಾದ ವಿರೂಪಾಕ್ಷ, ಸುತ್ತಲೂ ಕಂಬಗಳು, ರಥಕ್ಕೆ ಚಾವಣಿ, 4 ಚಕ್ರದ ರಥವನ್ನು ಎಳೆಯುತ್ತಿರುವ 2 ಆನೆಗಳನ್ನು ಕಾಣಬಹುದು. ರಥದಲ್ಲಿನ ಕಂಬ, ಚಾವಣಿ, ಆನೆಗಳ ಮೇಲೆ ಇರುವ ಸೂಕ್ಷ್ಮ ಕೆತ್ತನೆಗಳು ಚಿತ್ತಾಕರ್ಷಕವಾಗಿದೆ. ಬಿಡುವಿನ ವೇಳೆ ರಥ ತಯಾರಿಕೆ ಮಾಡುತ್ತಿದ್ದು, 1 ತಿಂಗಳಲ್ಲಿ ನಿರ್ಮಾಣವಾಗಿದೆ.

Follow Us:
Download App:
  • android
  • ios