ಮನುಷ್ಯ ಮತ್ತು ನಾಯಿ ನಡುವಿನ ಪ್ರೀತಿ-ಬಾಂಧ್ಯವ್ಯ ಹೊಸದೇನೂ ಅಲ್ಲ. ಇತಿಹಾಸದಲ್ಲಿಯೇ ಅನೇಕ ಪುರಾವೆಗಳು  ಸಿಗುತ್ತವೆ.  ಇಲ್ಲಿ ಮತ್ತೊಂದು ಅಂಥದ್ದೆ ಕತೆ ಇದೆ. ನಾಯಿಯ ನಂಬಿಕೆಗೆ ನಾಯಿಯೇ ಸಾಟಿ...

ಐಎಎಸ್ ಅಧಿಕಾರಿ ಡಿಕೆ ರವಿ ಸಾವಿನ ಸಂದರ್ಭ ಅವರನ್ನು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯುವ ವೇಳೆ ಅವರ ಮನೆಯ ನಾಯಿ ಕಣ್ಣೀರು ಇಟ್ಟಿದ್ದನ್ನು ಮರೆಯಲು ಸಾಧ್ಯವೇ ಇಲ್ಲ. ಇಲ್ಲೊಬ್ಬ ಶ್ವಾನ ಮಹಾರಾಜ ತನ್ನ ಒಡೆಯನಿಗಾಗಿ 80 ದಿನಗಳಿಂದ ಒಂದೇ ಜಾಗದಲ್ಲಿ ಕಾದು ಕುಳಿತಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಗಸ್ಟ್ 21 ರಂದು ದುರ್ಘಟನೆ ನಡೆದು ಹೋಗಿತ್ತು. ಮಾಲೀಕ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೆ ಈಡಾಗಿದ್ದ. ಆದರೆ ಆತನ ನೆಚ್ಚಿನ ನಾಯಿ ಅಂದಿನಿಂದ ಇಂದಿನ ವರೆಗೂ ಅಲ್ಲೆ ಕುಳಿತುಕೊಂಡಿದೆ.

ಅನಂತ ನಿಧನದ ನಡುವೆ ಮತ್ತೊಂದು ಶೋಕ, ಮರೆಯಾದ ಪತ್ತೆದಾರಿ

ಮಂಗೋಲಿಯಾದ ಹೋಗೋಟ್ ನ ಕತೆ ಇದಾಗಿದ್ದರೂ ಇಡೀ ಮನುಕುಲಕ್ಕೆ ಕಣ್ಣೀರು ತರಿಸುತ್ತದೆ. ತನ್ನ ಮಾಲೀಕನಿಗಾಗಿ ಶ್ವಾನ ಮಹಾರಾಜ ಅವ್ಯಕ್ತ ಭಾವನೆ ಹೊರ ಹಾಕುತ್ತ ಇರುತ್ತಾನೆ. ಚೀನಾನ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ನಾಯಿಯನ್ನು ಅಲ್ಲಿಂದ ಕದಲಿಸಲು ಸಾಕಷ್ಟು ಜನ ಪ್ರಯತ್ನಿಸಿದರೂ ಮತ್ತೆ ಶ್ವಾನ ಒಡೆಯನ ನೆನಪಲ್ಲಿ ಕೊರಗುತ್ತ ಅದೆ ಜಾಗಕ್ಕೆ ಹೋಗಿ ಕುಳಿತುಕೊಳ್ಳುತ್ತದೆ.