ಕೆಜಿಹಳ್ಳಿಯಲ್ಲಿ  ಯುವತಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ. ಕೆಜಿ ಹಳ್ಳಿ ಪೊಲೀಸರಿಂದ ಆರೋಪಿ ಇರ್ಷಾದ್ ಬಂಧನ ಮಾಡಲಾಗಿದೆ. ಯುವತಿ ಮತ್ತು ಪೋಷಕರು ಯುವಕನ ಗುರುತು ಪತ್ತೆ ಹಚ್ಚಿದ್ದಾರೆ. ಬಂಧಿತ ಆರೋಪಿಯ ಹೆಸರು ಇರ್ಷಾದ್ ಆಗಿದ್ದು, ಈತ ಯುವತಿಯ ಸಂಬಂಧಿ ಎಂದು ತಿಳಿದು ಬಂದಿದೆ. ಯುವತಿಯನ್ನು ಪ್ರೀತಿಸುತ್ತಿದ್ದ ಆರೋಪಿ ಇರ್ಷಾದ್ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಬೆಂಗಳೂರು(ಜ.08): ಕೆಜಿಹಳ್ಳಿಯಲ್ಲಿ ಯುವತಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ. ಕೆಜಿ ಹಳ್ಳಿ ಪೊಲೀಸರಿಂದ ಆರೋಪಿ ಇರ್ಷಾದ್ ಬಂಧನ ಮಾಡಲಾಗಿದೆ. ಯುವತಿ ಮತ್ತು ಪೋಷಕರು ಯುವಕನ ಗುರುತು ಪತ್ತೆ ಹಚ್ಚಿದ್ದಾರೆ. ಬಂಧಿತ ಆರೋಪಿಯ ಹೆಸರು ಇರ್ಷಾದ್ ಆಗಿದ್ದು, ಈತ ಯುವತಿಯ ಸಂಬಂಧಿ ಎಂದು ತಿಳಿದು ಬಂದಿದೆ. ಯುವತಿಯನ್ನು ಪ್ರೀತಿಸುತ್ತಿದ್ದ ಆರೋಪಿ ಇರ್ಷಾದ್ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಬಂಧಿತ ಇರ್ಷಾದ್​, ಯುವತಿ ನಡುವೆ ಅಕ್ರಮ ಸಂಬಂಧ ಇತ್ತು ಎಂಬ ಶಂಕೆ ವ್ಯಕ್ತವಾಗಿದೆ. ಈತ ಆರೋಪ ಮಾಡಿದ ಯುವತಿಯ ಅಕ್ಕನ ಗಂಡನಾಗಿದ್ದಾನೆ. ತನ್ನ ಪತ್ನಿಯ ತಂಗಿಯನ್ನೂ ಈತ ಮದುವೆಯಾಗಲು ಪ್ಲಾನ್​ ಮಾಡಿದ್ದ. ಯುವತಿಗೂ ತನ್ನನ್ನು ಮದುವೆಯಾಗಲು ಇಷ್ಟ ಇತ್ತು. ಯುವತಿಗೆ ಮುತ್ತು ನೀಡಿದರೆ ಬೇರೆ ಯಾರೂ ಮದುವೆಯಾಗಲು ಒಪ್ಪಲ್ಲ, ಬಳಿಕ ತಾನೇಢ ಮದುವೆಯಾಗಬಹುದುದೆಂದು ಲೈಂಗಿಕ ದೌರ್ಜನ್ಯವಾಗಿದೆ ಎಂದು ಕೆಟ್ಟ ಹೆಸರು ಬರಲು ಹೀಗೆ ಮಾಡಿದೆ ಎಂದು ವಿಚಾರಣೆ ವೇಳೆ ಇರ್ಷಾದ್ ತುಟಿ ಬಿಚ್ಚಿದ್ದಾನೆ.

ಪೊಲೀಸರ ವಿಚಾರಣೆ ವೇಳೆ ಆರೋಪಿ ತನ್ನ ಸಂಬಂಧಿ ಎಂದು ಗೊತ್ತಿದ್ದರೂ ಯುವತಿ ಗೊಂದಲದ ಹೇಳಿಕೆಯನ್ನು ನೀಡಿದ್ದಾಳೆ. ಆದರೆ ಘಟನೆಯ ಬಗ್ಗೆ ಪೊಲೀಸ್ ವಿಚಾರಣೆಯ ಬಳಿಕ ಸಂಪೂರ್ಣ ವರದಿ ತಿಳಿಯಲಿದೆ.