ನ.8ರಿಂದ ಡಿ.31ರವರೆಗಿನ ಬ್ಯಾಂಕ್ ವಹಿವಾಟಿನ ವಿವರ ಕೊಡುವಂತೆ ಬಿಜೆಪಿ ಸದಸ್ಯರಿಗೆ ಸೂಚಿಸಿರುವ ಮೋದಿ, ವಹಿವಾಟಿನ ವಿವರವನ್ನು ಜನವರಿ 1ರಂದೇ ಅಮಿತ್ ಶಾಗೆ ಸಲ್ಲಿಸಲು ಕಟ್ಟಾಜ್ಞೆ ಹೊರಡಿಸಿದ್ದಾರೆ. ವಿಶ್ಲೇಷಕರು ಮೋದಿ ಬಿಜೆಪಿ ಸಂಸದರು ಮತ್ತು ಶಾಸಕರಿಗೆ ನೀಡಿದ ಈ ಆಜ್ಞೆ ನೋಟ್ ಬ್ಯಾನ್ ಬಳಿಕಸದ ಅತ್ಯಂತ ಮಹತ್ವದ ಹೆಜ್ಜೆ ಎಂದಿದ್ದಾರೆ.
ನವದೆಹಲಿ(ನ.29): ‘ಬ್ಯಾಂಕ್ ವಹಿವಾಟು ಮಾಹಿತಿಯನ್ನು ಅಮಿತ್ ಶಾಗೆ ಕೊಡಿ’ ಎಂದು ಬಿಜೆಪಿ ಸಂಸದರು ಮತ್ತು ಶಾಸಕರಿಗೆ ಪ್ರಧಾನಿ ನರೇಂದ್ರ ಮೋದಿ ಖಡಕ್ ಸೂಚನೆ ನೀಡಿದ್ದಾರೆ.
ನ.8ರಿಂದ ಡಿ.31ರವರೆಗಿನ ಬ್ಯಾಂಕ್ ವಹಿವಾಟಿನ ವಿವರ ಕೊಡುವಂತೆ ಬಿಜೆಪಿ ಸದಸ್ಯರಿಗೆ ಸೂಚಿಸಿರುವ ಮೋದಿ, ವಹಿವಾಟಿನ ವಿವರವನ್ನು ಜನವರಿ 1ರಂದೇ ಅಮಿತ್ ಶಾಗೆ ಸಲ್ಲಿಸಲು ಕಟ್ಟಾಜ್ಞೆ ಹೊರಡಿಸಿದ್ದಾರೆ.
ವಿಶ್ಲೇಷಕರು ಮೋದಿ ಬಿಜೆಪಿ ಸಂಸದರು ಮತ್ತು ಶಾಸಕರಿಗೆ ನೀಡಿದ ಈ ಆಜ್ಞೆ ನೋಟ್ ಬ್ಯಾನ್ ಬಳಿಕಸದ ಅತ್ಯಂತ ಮಹತ್ವದ ಹೆಜ್ಜೆ ಎಂದಿದ್ದಾರೆ.
