ನವದೆಹಲಿ[ಜು.23]ಪ್ರಧಾನಿ ನರೇಂದ್ರ ಮೋದಿ ಸೋಶಿಯಲ್ ಮಿಡಿಯಾಗಳಲ್ಲಿ ಬಹಳಷ್ಟು ಆ್ಯಕ್ಟಿವ್ ಆಗಿರುತ್ತಾರೆ. ಮೋದಿಯನ್ನು ಟ್ವಿಟರ್, ಫೇಸ್ಬುಕ್ ಅಥವಾ ಇನ್ ಸ್ಟಾಗ್ರಾಂ ಅಕೌಂಟ್ ಫಾಲೋ ಮಾಡುತ್ತಿದ್ದರೆ , ಅವರ ದಿನಚರಿ, ಕೆಲಸ-ಕಾರ್ಯದ ಮಾಹಿತಿ ಸಿಗುತ್ತದೆ. ಸದ್ಯ ಪಿಎಂ ಮೋದಿ ತಮ್ಮ ಇನ್ಸ್ಟಾಗ್ರಾಂ ಪುಟ್ಟ ಮಗುವಿನೊಂದಿಗೆ ಕ್ಲಿಕ್ಕಿಸಿದ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. 

'ಪುಟ್ಟ ಗೆಳೆಯ'ನೊಂದಿಗೆ ಆಡುತ್ತಿರುವ ಫೋಟೋ ಶೇರ್ ಮಾಡಿಕೊಂಡಿರುವ ಮೋದಿ 'ಇಂದು ಸಂಸತ್ತಿನಲ್ಲಿ ಭೇಟಿಯಾಗಲು ಬಹಳ ವಿಶೇಷ ಗೆಳೆಯ ಆಗಮಿಸಿದ್ದ' ಎಂದು ಬರೆದಿದ್ದಾರೆ. ಎರಡು ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಮೊದಲ ಫೋಟೋದಲ್ಲಿ ಪ್ರಧಾನಿ ಮಗುವಿಗೆ ತಿಂಡಿ ತಿನ್ನಿಸುತ್ತಿದ್ದರೆ, ಎರಡನೇ ಫೋಟೋದಲ್ಲಿ ಮಡಿಲಲ್ಲಿ ಕುಳ್ಳಿರಿಸಿ ಆಡಿಸುತ್ತಿರುವುದನ್ನು ನೋಡಬಹುದು. ಈ ವೇಳೆ ಮಗು ಪಿಎಂ ಮೋದಿ ಮೇಜಿನ ಮೇಲಿರುವ ಚಾಕೋಲೇಟ್ ಕಡೆ ನೋಡುತ್ತಿರುವುದನ್ನು ನೋಡಬಹುದಾಗಿದೆ.

 
 
 
 
 
 
 
 
 
 
 
 
 

A very special friend came to meet me in Parliament today.

A post shared by Narendra Modi (@narendramodi) on Jul 23, 2019 at 2:12am PDT

ಈ ಮುದ್ದಾದ ಮಗು ಮಧ್ಯಪ್ರದೇಶ ಸಂಸದ ಸತ್ಯನಾರಾಯಣ ಜತಿಯಾರ ಮೊಮ್ಮಗ. ಜತಿಯಾ ಕುಟುಂಬಸ್ಥರು ಮೋದಿ ಭೇಟಿಗಾಗಿ ಸಂಸತ್ತಿಗೆ ಆಗಮಿಸಿದಾಗ ಮೋದಿ ಅವರು ಮಗುವನ್ನು ಎತ್ತಿಕೊಂಡು ಆಡಿಸಿದ್ದಾರೆ. 

ಹೀಗಿದ್ದರೂ ಜಮ್ಮು ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಮಾತ್ರ ಈ ಫೋಟೋ ವಿಚಾರವಾಗಿ ಟ್ವೀಟ್ ಮಾಡಿ ಮೋದಿ ಕಾಲೆಳೆದಿದ್ದಾರೆ.