ಶಿಕಾಗೋ[ಮೇ.22]: ಕೆಲ ದಿನಗಳ ಹಿಂದಷ್ಟೇ ಮಗು ಪಡೆಯಬೇಕೆಂಬ ದುರಾಸೆಯಿಂದ ಗರ್ಭಿಣಿಯ ಹೊಟ್ಟೆ ಬಗೆದು ಮಗು ಹೊರ ತೆಗೆದ ಪ್ರಕರಣ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಘಟನೆಯ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಮಗುವಿನ ಸ್ಥಿತಿ ಗಂಭೀರವಾಗಿತ್ತು ಹಾಗೂ ಯವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿರಲಿಲ್ಲ. ಆದರೀಗ ಆಸ್ಪತ್ರೆಯ ಸಿಬ್ಬಂದಿ ಫೋಟೋ ಒಂದನ್ನು ಬಿಡುಗಡೆಗೊಳಿಸಿದ್ದು, ಮಗುವಿನ ಆತ್ಮಸ್ಥೈರ್ಯ ಎಷ್ಟಿದೆ ಎಂಬುವುದಕ್ಕೆ ಉದಾಹರಣೆಯಂತರಿದೆ,.

ತಾಯಿಯ ಹೊಟ್ಟೆ ಬಗೆದು ಮಗುವನ್ನು ಹೊರ ತೆಗೆದ ಕಾರಣ ಮಗುವಿನ ಸ್ಥಿತಿ ಗಂಭೀರವಾಗಿತ್ತು. ಆದರೆ ಮಗುವನ್ನು ಬದುಕಿಸಲೇಬೇಕೆಂಬ ಪಣ ತೊಟ್ಟಿದ್ದ ವೈದ್ಯರು, ಹಗಲಿರುಳೆನ್ನದೇ ಪುಟ್ಟ ಮಗುವಿನ ಬಳಿ ಇದ್ದು ಚಿಕಿತ್ಸೆ ನೀಡಿದ್ದರು. ಅತ್ತ ಕುಟುಂಬವೂ ಮಗುವಿನ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದರು. ಮನೆ ಸೊಸೆಯನ್ನು ಕಳೆದುಕೊಂಡು ಶೋಕವಾಚರಿಸುತ್ತಿದ್ದ ಕುಟುಂಬಕ್ಕೆ ಈ ಪುಟ್ಟ ಕಂದಮ್ಮನಾದರೂ ಬದುಕಿ ಬರಲಿ ಎಂಬ ಆಸೆ. ವೈದ್ಯರ ಫಲ ಹಾಗೂ ಕುಟುಂಬದ ಪ್ರಾರ್ಥನೆಯ ಫಲ ಎಂಬಂತೆ ಮಗು ತನ್ನ ಅಪ್ಪನ ಕೈ ಸೇರುತ್ತಿದ್ದಂತೆಯೇ ಪುಟ್ಟ ಕಣ್ಗಳನ್ನು ತೆರೆದು ಎಲ್ಲರ ಆತಂಕವನ್ನೂ ದೂರ ಮಾಡಿದೆ.

ಹಲವಾರು ದಿನಗಳಿಂದ ಮೌನವಾಗಿದ್ದ ಪುಟ್ಟ ಕಂದ, ತನ್ನ ಕೈ ಸೇರುತ್ತಿದ್ದಂತೆಯೇ ಕಣ್ಣು ಬಿಟ್ಟಿದ್ದನ್ನು ನೋಡಿದ ತಂದೆ ಏನೂ ಹೇಳಲಾರದೆ ಅಳುತ್ತಾ ನಿಂತಿದ್ದಾರೆ. ಒಂದೆಡೆ ಹೆಂಡತಿಯನ್ನು ಕಳೆದುಕೊಂಡ ದುಃಖವಾದರೆ, ಮತ್ತೊಂದೆಡೆ ಮಗು ಚಿಕಿತ್ಸೆಗೆ ಸ್ಪಂದಿಸುತ್ತಿದೆ ಎಂಬ ಖುಷಿ ಆ ತಂದೆಯನ್ನು ಮೌನವಾಗಿಸಿತ್ತು. 

ಮಗುವಿಗಾಗಿ ಗರ್ಭಿಣಿ ಹೊಟ್ಟೆಯನ್ನೇ ಬಗೆದ ಪ್ರೇಮಿಗಳು!