94% ಐಟಿ ಪದವೀಧರರು ಕೆಲಸಕ್ಕೆ ಯೋಗ್ಯರಲ್ಲ..!

94% of IT graduates not fit for hiring: Tech Mahindra CEO
Highlights

ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಕೌಶಲಯುಕ್ತ ಎಂಜಿನಿಯರ್’ಗಳು ಬೇಕಾಗಿದ್ದಾರೆ. ನಾಸ್ಕಾಮ್[Nasscom) ವರದಿ ಪ್ರಕಾರ 2022ರ ವೇಳೆಗೆ ಸೈಬರ್ ಸುರಕ್ಷತೆಗೆ 6 ಮಿಲಿಯನ್ ಎಂಜಿನಿಯರ್’ಗಳ ಅವಶ್ಯಕತೆಯಿದೆ. ಆದರೆ ನಾವು ಕೌಶಲ್ಯಯುಕ್ತ ಎಂಜಿನಿಯರ್’ಗಳ ಕೊರತೆ ಎದುರಿಸುತ್ತಿದ್ದಾರೆ. 94% ಐಟಿ ಪದವೀಧರರು ಕೆಲಸಕ್ಕೆ ಯೋಗ್ಯರಲ್ಲ ಎಂದು ಸಿ.ಪಿ ಗುರ್ನಾನಿ ಹೇಳಿದ್ದಾರೆ.

ನವದೆಹಲಿ[ಜೂ.04]: ದೆಹಲಿಯಂತಹ ನಗರದ ವಿದ್ಯಾರ್ಥಿಯೋರ್ವ 60% ಅಂಕಗಳಿಸಿದರೆ ಬಿಎ ಇಂಗ್ಲೀಷ್ ಓದುವುದಿಲ್ಲ, ಬದಲಾಗಿ ಖಂಡಿತವಾಗಿ ಎಂಜಿನಿಯರಿಂಗ್ ವ್ಯಾಸಂಗ ಮಾಡಲು ಮುಂದಾಗುತ್ತಾರೆ. ನಾವು ವಿದ್ಯಾರ್ಥಿಗಳನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತಿದ್ದೇವಾ..? ಎನ್ನುವ ಅನುಮಾನ ಮೂಡುತ್ತಿದೆ ಎಂದು ಟೆಕ್ ಮಹೇಂದ್ರ ಕಂಪನಿಯ ಸಿಇಓ ಸಿ.ಪಿ ಗುರ್ನಾನಿ ಹೇಳಿದ್ದಾರೆ.
ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಕೌಶಲಯುಕ್ತ ಎಂಜಿನಿಯರ್’ಗಳು ಬೇಕಾಗಿದ್ದಾರೆ. ನಾಸ್ಕಾಮ್[Nasscom) ವರದಿ ಪ್ರಕಾರ 2022ರ ವೇಳೆಗೆ ಸೈಬರ್ ಸುರಕ್ಷತೆಗೆ 6 ಮಿಲಿಯನ್ ಎಂಜಿನಿಯರ್’ಗಳ ಅವಶ್ಯಕತೆಯಿದೆ. ಆದರೆ ನಾವು ಕೌಶಲ್ಯಯುಕ್ತ ಎಂಜಿನಿಯರ್’ಗಳ ಕೊರತೆ ಎದುರಿಸುತ್ತಿದ್ದಾರೆ. 94% ಐಟಿ ಪದವೀಧರರು ಕೆಲಸಕ್ಕೆ ಯೋಗ್ಯರಲ್ಲ ಎಂದು ಸಿ.ಪಿ ಗುರ್ನಾನಿ ಹೇಳಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಗುರ್ನಾನಿ, ಅಗ್ರ 10 ಮಾಹಿತಿ ತಂತ್ರಜ್ಞಾನ ಕಂಪನಿಗಳು ಕೇವಲ 6% ಎಂಜಿನಿಯರಿಂಗ್ ಪದವೀಧರರನ್ನು ನೇಮಕ ಮಾಡಿಕೊಳ್ಳುತ್ತಿವೆ. ಉಳಿದ 94% ಎಂಜಿನಿಯರ್ ಪದವೀಧರರ ಕಥೆ ಏನು..? ಎಂದಿದ್ದಾರೆ.
ಎಂಜಿನಿಯರ್’ಗಳನ್ನು ನೇಮಕ ಮಾಡಿಕೊಳ್ಳುವುದು ಇಂದು ಮಹತ್ತರ ಪರಿಣಾಮ ಬೀರುತ್ತಿದೆ. ಮೊದಲೆಲ್ಲ ಒಂದು ಮಿಲಿಯನ್ ಡಾಲರ್ ಆದಾಯಕ್ಕೆ 20 ಜನರನ್ನು ನೇಮಕ ಮಾಡಿಕೊಳ್ಳಲಾಗುತಿತ್ತು. ಆದರೆ ಈಗ ಕಾಲ ಬದಲಾಗಿದೆ. ಹೆಚ್ಚುತ್ತಿರುವ ಯಾಂತ್ರೀಕರಣದ ಬಳಕೆಯಿಂದ ಅದೇ ಸಂಬಳಕ್ಕೆ 15 ಜನರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಯಾಂತ್ರೀಕರಣದಿಂದಾಗಿ ಆಗ 25% ಜನರಷ್ಟೇ ಸಾಕಾಗುತ್ತದೆ.      

loader