ರಾಜ್ಯದಲ್ಲಿ ಇಸ್ರೇಲ್ ಮಾದರಿ ಕೃಷಿಪದ್ಧತಿ ಜಾರಿಗೆ ಮಂಡ್ಯದಲ್ಲಿ ಪೈಲೆಟ್ ಪ್ರಾಜೆಕ್ಟ್  ಇಸ್ರೇಲ್‌ನಿಂದ ಪರಿಣತರನ್ನು ಕರೆಸಿ ಅಗತ್ಯ ಮಾಹಿತಿ ಮತ್ತು ತರಬೇತಿ 

ಬೆಂಗಳೂರು: ರಾಜ್ಯದಲ್ಲಿ ಇಸ್ರೇಲ್ ಮಾದರಿ ಕೃಷಿಪದ್ಧತಿ ಜಾರಿಗೆ ಮಂಡ್ಯದಲ್ಲಿ 900 ಎಕರೆ ಭೂಮಿಯನ್ನು ಗೊತ್ತುಪಡಿಸಲಾಗಿದೆ ಎಂದು ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯದ ಈ ಯೋಜನೆ ಪೈಲೆಟ್ ಪ್ರಾಜೆಕ್ಟ್ ಆಗಿದ್ದು, ಇಸ್ರೇಲ್ನಿಂದ ಪರಿಣತರನ್ನು ಕರೆಸಿ ಅಗತ್ಯ ಮಾಹಿತಿ ಮತ್ತು ತರಬೇತಿಯನ್ನು ಕೊಡಿಸಲು ಉದ್ದೇಶಿಸಿರುವುದಾಗಿ ಸಿಎಂ ತಿಳಿಸಿದ್ದಾರೆ.

Scroll to load tweet…

ರಾಜ್ಯದಲ್ಲಿ ಮಳೆಗಾಲಕ್ಕೆ ಮುನ್ನವೇ ಶೇ.51 ರಷ್ಟು ಹೆಚ್ಚುಮಳೆಯಾಗಿದೆ. ಇನ್ನೂ ಮೂರು ದಿನ ಉತ್ತಮ ಮಳೆಯಾಗಲಿದೆ. ಕೃಷಿಚಟುವಟಿಕೆ ಭರದಿಂದ ಸಾಗಿದೆ. ರೈತರಿಗೆ ಭಿತ್ತನೆ ಬೀಜ, ರಾಸಾನಿಕಗಳ ಪೂರೈಕೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ, ಎಂದು ಅವರು ತಿಳಿಸಿದ್ದಾರೆ.

ಕಳಪೆ ಗುಣಮಟ್ಟದ ಭಿತ್ತನೆ ಬೀಜ, ರಾಸಾನಿಕಗಳ ಪೂರೈಕೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ತಪ್ಪು ಮಾಡಿದವರು ಯಾರೇ ಆದರೂ ಅಂಥವರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಈ ಬಗ್ಗೆ ಸರ್ಕಾರದ ಮುಖ್ಯಕಾರ್ಯದರ್ಶಿಯವರಿಗೆ ಆದೇಶ ಕೊಟ್ಟಿದ್ದೇನೆ, ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಇಸ್ರೇಲ್ ದೇಶದಲ್ಲಿ ಕೃಷಿಯ ವಿನೂತನ ರೀತಿಗಳನ್ನು ಅಧ್ಯಯನ ನಡೆಸಲು ಕಳೆದ ವರ್ಷ ಆಗಸ್ಟ್‌ನಲ್ಲಿ ಕುಮಾರಸ್ವಾಮಿ ನಿಯೋಗ ಇಸ್ರೇಲ್‌ಗೆ ಭೇಟಿ ನೀಡಿತ್ತು. ಪುಟ್ಟ ರಾಷ್ಟ್ರವಾಗಿರುವ ಇಸ್ರೇಲ್ ಕೃಷಿ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದು, ಅಲ್ಲಿನ ಆಧುನಿಕ ಹನಿ ಮತ್ತು ಸೂಕ್ಷ್ಮ ನೀರಾವರಿಯ ವ್ಯವಸ್ಥೆಯು ಬರಪೀಡಿತ ಪ್ರದೇಶಗಳಲ್ಲಿ ಅನುಕೂಲಕರವಾಗಿದೆ.