ದುಬೈ[ಏ.17]: ಭಾರತ ಮೂಲದ 9 ವರ್ಷದ ಬಾಲಕಿಯೊಬ್ಬಳು ದುಬೈ ಡ್ಯೂಟಿ ಫ್ರೀ ಮಿಲೆನಿಯಂ ಮಿಲಿಯನೇರ್‌ ಜಾಕ್‌ಪಾಟ್‌ನಲ್ಲಿ ಭರ್ಜರಿ 7 ಕೋಟಿ ರು. ಲಾಟರಿ ಗೆದ್ದಿದ್ದಾರೆ.

ದುಬೈನ ಶಾಲೆಯೊಂದರಲ್ಲಿ ಅಧ್ಯಯನ ಮಾಡುತ್ತಿರುವ ಎಲಿಜಾ.ಎಂ ಎಂಬ ಭಾರತೀಯ ಮೂಲದ ಬಾಲಕಿಯು 1 ಮಿಲಿಯನ್‌ ಡಾಲರ್‌ ಮೌಲ್ಯದ ಜಾಕ್‌ಪಾಟ್‌ ಗೆದ್ದಿದ್ದಾರೆ. ಈ ಮೂಲಕ 2013ರಲ್ಲಿ ಮ್ಯಾಕ್‌ ಲಾರೆನ್‌ ಕೋಪ್‌ ಹೆಸರಿನ ಐಷಾರಾಮಿ ಕಾರನ್ನು ಬಹುಮಾನವಾಗಿ ಪಡೆದಿದ್ದ ಬಾಲಕಿಗೆ ಮತ್ತೊಂದು ಅದೃಷ್ಟ ಖುಲಾಯಿಸಿದೆ.

ಇನ್ನು ತಾವು ಮುಂಬೈ ಮೂಲದವರು ಎಂಬ ಕಾರಣಕ್ಕೆ ತಮ್ಮನ್ನು ತಾವು ಎಂ ಎಂದೇ ಕರೆದುಕೊಳ್ಳುವ ಇವರು 9 ಸಂಖ್ಯೆಯನ್ನು ತಮಗೆ ಲಕ್ಕಿ ಎನ್ನುವ ಕಾರಣಕ್ಕೆ 0333 ಸಂಖ್ಯೆಯ ಲಾಟರಿ ಟಿಕೆಟ್‌ ಅನ್ನು ಆನ್‌ಲೈನ್‌ ಮೂಲಕ ತಮ್ಮ ಪುತ್ರಿ ಹೆಸರಿನಲ್ಲಿ ಎಂ ಎಂಬುವರು ಖರೀದಿಸಿದ್ದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.