ಕಳೆದ ಹತ್ತು ವರ್ಷಗಳಲ್ಲಿ ಕೆಲವರು ರೈಲುಗಳ ಅಪಘಾತ, ಭ್ರಷ್ಟಾಚಾರ ಆರೋಪಗಳಿಗಾಗಿ ರೈಲ್ವೆ ಖಾತೆಗೆ ರಾಜೀನಾಮೆ ನೀಡಿದ್ದು, ಮತ್ತೆ ಕೆಲವರು ತಮ್ಮ ರಾಜಕೀಯ ಆಕಾಂಕ್ಷೆಗಳ ಈಡೇರಿಕೆಗಾಗಿ ರೈಲ್ವೆ ಸಚಿವ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು.
ನವದೆಹಲಿ(ಸೆ.04): ರೈಲ್ವೆಗೆ ನೂತನ ಸಚಿವರಾಗಿ ಪೀಯೂಷ್ ಗೋಯೆಲ್ ನೇಮಕದೊಂದಿಗೆ, ರೈಲ್ವೆ ಕಳೆದ 9 ವರ್ಷಗಳಲ್ಲಿ 9ನೇ ಸಚಿವರನ್ನು ಕಾಣುವಂತಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಕೆಲವರು ರೈಲುಗಳ ಅಪಘಾತ, ಭ್ರಷ್ಟಾಚಾರ ಆರೋಪಗಳಿಗಾಗಿ ರೈಲ್ವೆ ಖಾತೆಗೆ ರಾಜೀನಾಮೆ ನೀಡಿದ್ದು, ಮತ್ತೆ ಕೆಲವರು ತಮ್ಮ ರಾಜಕೀಯ ಆಕಾಂಕ್ಷೆಗಳ ಈಡೇರಿಕೆಗಾಗಿ ರೈಲ್ವೆ ಸಚಿವ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. 2009ರಿಂದ 2017ರ ಅವಧಿಯಲ್ಲಿ ರೈಲ್ವೆ ಸಚಿವರ ಹುದ್ದೆಯನ್ನು ನಿರ್ವಹಿಸಿದವರೆಂದರೆ, ಮಮತಾ ಬ್ಯಾನರ್ಜಿ, ದಿನೇಶ್ ತ್ರಿವೇದಿ, ಮುಕುಲ್ ರಾಯ್, ಸಿ.ಪಿ.ಜೋಷಿ, ಪವನ್ ಕುಮಾನ್ ಬನ್ಸಲ್, ಮಲ್ಲಿಕಾರ್ಜುನ ಖರ್ಗೆ, ಡಿ.ವಿ.ಸದಾನಂದಗೌಡ, ಸುರೇಶ್ ಪ್ರಭು ಮತ್ತು ಇದೀಗ ಪೀಯೂಷ್ ಗೋಯೆಲ್.
