ಕೆಂಪು ಉಗ್ರರ ಅಟ್ಟಹಾಸಕ್ಕೆ ಹುತಾತ್ಮರಾದ ಒಂಬತ್ತು ಸಿಆರ್‌ಪಿಎಫ್ ಯೋಧರು

First Published 13, Mar 2018, 3:44 PM IST
9 CRPF personnel martyred in Naxal attack in Chhattisgarhs Sukma district
Highlights

ಕೆಂಪು ಉಗ್ರರು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದು,  ಛತ್ತೀಸ್‌ಗಢ್‌ನ ಬಸ್ತರ್ ವಿಭಾಗದ ಸುಕ್ಮಾ ಜಿಲ್ಲೆಯಲ್ಲಿ ಇವರ ದಾಳಿಗೆ ಒಂಬತ್ತು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. ಈ ದಾಳಿಯಲ್ಲಿ 10 ಯೋಧರು ಗಾಯಗೊಂಡಿದ್ದಾರೆ.

ಹೊಸದಿಲ್ಲಿ: ಕೆಂಪು ಉಗ್ರರು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದು,  ಛತ್ತೀಸ್‌ಗಢ್‌ನ ಬಸ್ತರ್ ವಿಭಾಗದ ಸುಕ್ಮಾ ಜಿಲ್ಲೆಯಲ್ಲಿ ಇವರ ದಾಳಿಗೆ ಒಂಬತ್ತು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. ಈ ದಾಳಿಯಲ್ಲಿ 10 ಯೋಧರು ಗಾಯಗೊಂಡಿದ್ದಾರೆ.

ಕೂಂಬಿಂಗ್ ಕಾರ್ಯಾಚರಣೆ ವೇಳೆ, ಯೋಧರ ಮೈನ್ ಪ್ರೊಟೆಕ್ಟಿವ್ ವಾಹನಕ್ಕೆ ಬೆಂಕಿ ಹಚ್ಚಿದ ನಕ್ಸಲರು ಈ ಕೃತ್ಯವೆಸಗಿದ್ದಾರೆ. 212ನೇ ಬ್ಯಾಟಲೀಯನ್‌ನ ಶಸ್ತ್ರಸಜ್ಜಿತ ಸಿಆರ್‌ಪಿಎಫ್ ಯೋಧರು ಕೂಂಬಿಂಗ್ ಕಾರ್ಯದಲ್ಲಿ ತೊಡಗಿದ್ದರು. ಬೆಳಗ್ಗೆ 8 ಗಂಟೆಗೆ ನಡೆದ ಕಾರ್ಯಾಚರಣೆ ವೇಳೆ ಓಡಿ ಹೋಗಿದ್ದ ನಕ್ಸಲರು, ಮಧ್ಯಾಹ್ನ ಮತ್ತೆ ದಾಳಿ ನಡೆಸಿದ್ದು, ಒಂಬತ್ತು ಯೋಧರು ಹತ್ಯೆಯಾಗಿದ್ದಾರೆ. ಗಾಯಗೊಂಡು ಮೂವರನ್ನು ಹೆಲಿಕಾಪ್ಟರ್ ಮೂಲಕ ರಾಯ್‌ಪುರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜ್ಯದಲ್ಲಿ 10 ಶಂಕಿತ ನಕ್ಸಲರನ್ನು ಕೊಂದ 11 ದಿನಗಳಲ್ಲಿಯೇ ಈ ದಾಳಿ ನಡೆದಿದ್ದು, ಆರು ತಿಂಗಳ ಹಿಂದೆ 25 ಸಿಆರ್‌ಪಿಎಫ್ ಜವಾನರನ್ನುಉಗ್ರರು ಕೊಂದಿದ್ದರು. ರಾಜ್ಯದಲ್ಲಿ ಹೆಚ್ಚಾಗಿದ್ದ ನಕ್ಸಲರನ್ನು ಹತ್ತಿಕ್ಕಲ್ಲು ಸರಕಾರ ಸಾಕಷ್ಟು ಯಶಸ್ವಿ ಆಗಿದ್ದು, ಸುಮಾರು 300 ಉಗ್ರರ ಹಟ್ಟುಡಗಿಸುವಲ್ಲಿಯೂ ಯಶಸ್ವಿಯಾಗಿದೆ. 
 

loader