ಶಾಲೆಯೊಂದರಲ್ಲಿ ವೇದಿಕೆ ಕುಸಿದು ಬಿದ್ದು 9 ಮಕ್ಕಳು ಸಾವು?

First Published 11, Jan 2018, 2:29 PM IST
9 child dead  due to collapse Stage
Highlights

ಇತ್ತೀಚೆಗೆ ಬೆಂಗಳೂರಿನ ಶಾಲೆಯೊಂದರಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಅಲ್ಲಿನ ವೇದಿಕೆ ಮೇಲೆ ಕುಣಿಯುತ್ತಿದ್ದ ಮಕ್ಕಳಲ್ಲಿ 9 ಮಕ್ಕಳು ಮೃತಪಟ್ಟಿದ್ದಾರೆ.

ಬೆಂಗಳೂರು (ಜ.11): ಇತ್ತೀಚೆಗೆ ಬೆಂಗಳೂರಿನ ಶಾಲೆಯೊಂದರಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಅಲ್ಲಿನ ವೇದಿಕೆ ಮೇಲೆ ಕುಣಿಯುತ್ತಿದ್ದ ಮಕ್ಕಳಲ್ಲಿ 9 ಮಕ್ಕಳು ಮೃತಪಟ್ಟಿದ್ದಾರೆ.

ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರ್ಯಕ್ರಮದ ಸಂಘಟನಕಾರರ ಮತ್ತು ಶಾಲೆಯ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಈ ಘಟನೆ ಸಂಭವಿಸಿದೆ. ಈ ಬಗ್ಗೆ ಶಾಲೆ ಸಿಬ್ಬಂದಿಗಳಿಗೆ ಎಚ್ಚರಿಸಲೇಬೇಕಿದೆ. ಈ ಸಂದೇಶವನ್ನು ಪ್ರತಿಯೊಬ್ಬ ಪೋಷಕರಿಗೆ ತಲುಪುವ ತನಕ ಶೇರ್ ಮಾಡಿ ಎಂಬ ಅಡಿಬರಹವಿರುವ ವಿಡಿಯೋವೊಂದು ಸಾಮಾಜಿಕ ಜಾಲತಾ ಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ವೇದಿಕೆಯ ಮೇಲೆ ಡ್ಯಾನ್ಸ್ ಮಾಡುತ್ತಿದ್ದ ಮಕ್ಕಳ ಮೇಲೆ ಕಬ್ಬಿಣದ ಪಿಲ್ಲರ್ ಮಗುಚಿ ಬೀಳುತ್ತದೆ.

ಇತ್ತೀಚೆಗೆ ಬೆಂಗಳೂರಿನ ಶಾಲೆಯೊಂದರಲ್ಲಿ ಈ ರೀತಿಯ ದುರ್ಘಟನೆಯೊಂದು ನಿಜಕ್ಕೂ ನಡೆದಿದೆಯೇ ಎಂದು ತನಿಖೆ ನಡೆಸಿದಾಗ ಈ ವಿಡಿಯೋದ ಅಸಲಿ ಕತೆ ತಿಳಿಯಿತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಇತ್ತೀಚಿನದ್ದಲ್ಲ. ಬದಲಾಗಿ ಫೆಬ್ರವರಿ 2016  ರಲ್ಲಿ ನಡೆದ ಘಟನೆ ಇದು. ಆ ಘಟನೆಯಲ್ಲಿ ೮ ಜನರಿಗೆ ಗಾಯಗಳಾಗಿದ್ದವೇ ಹೊರತು ಯಾರೂ ಕೂಡ ಮೃತಪಟ್ಟಿರಲಿಲ್ಲ. 2016 ರ ಫೆಬ್ರವರಿ 15 ರಂದು ಬೆಂಗಳೂರಿನ ಮ್ಯಾಕ್ಸ್‌ಮುಲ್ಲರ್ ಪ್ರೌಢಶಾಲೆ ಮತ್ತು ಕಾರ್ಯಕ್ರಮದ ಸಂಘಟಕರು ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಳ್ಳದೇ ಇರುವುದರಿಂದ ಈ ಘಟನೆ ನಡೆದಿತ್ತು. ಸುಮಾರು ೮.೩೦ರ ವೇಳೆಗೆ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ದುರ್ಘಟನೆ ಸಂಭವಿಸಿರಲಿಲ್ಲ

 

loader