ನವದೆಹಲಿ[ಆ. 29]  ಇದೊಂದು ವಿಚಿತ್ರ ಪ್ರಕರಣ. 88 ವರ್ಷದ ಅಜ್ಜಿ ಕೊನೆಗೂ ಸಿಕ್ಕಿಬಿದ್ದಿದ್ದಾಳೆ. ಅದು 10ನೇ ಸಾರಿ ಸಿಕ್ಕಿಬಿದ್ದಿದ್ದಾಳೆ. ಆಕೆಗೆ 25 ವರ್ಷ ಆದಾಗಿನಿಂದ ಈಕೆಯದು ಡ್ರಗ್ಸ್ ಮಾರುವುದೇ ಕೆಲಸ. ಮಾದಕ ದೃವ್ಯ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಅಜ್ಜಿಯನ್ನು ಮತ್ತೆ ಬಂಧನ ಮಾಡಲಾಗಿದೆ. 

ಪಶ್ಚಿಮ ದೆಹಲಿಯ ರಾಜ್ ರಾಣಿ ಟೊಪ್ಲಿ ಈ ಈ ಚಾಲಾಕಿ ಅಜ್ಜಿ. ರಾಷ್ಟ್ರ ರಾಜಧಾನಿಯ ಅತಿ ಹಳೆಯ ಡ್ರಗ್ ಡೀಲರ್ ಎಂಬ ಕುಖ್ಯಾತಿಯೂ ಈ ಅಜ್ಜಿಗಿದೆ. ವಿಧವೆಯಾಗಿರುವ ಅಜ್ಜಿ ಪೊಲೀಸರಿಗೆ ಪರಿಚಿತಳಾಗಿಬಿಟ್ಟಿದ್ದಾಳೆ. ಆಕೆಯನ್ನು ಬಂಧಿಸಿದಾಗ ಅವಳ ಬಳಿ 16 ಗ್ರಾಂ ಹೆರಾಯಿನ್ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಪೊಲೀಸರ ಬಲೆಗೆ ಬಿದ್ದಿರುವ ಅಜ್ಜಿ ಇನ್ನು ಮುಂದಿನ ಜೀವನವನ್ನು ಜೈಲಿನಲ್ಲಿಯೇ ಕಳೆಯಬೇಕೋ ಗೊತ್ತಿಲ್ಲ. ಮಾದಕ ದ್ರವ್ಯ ಸಾಗಾಟದಲ್ಲಿ 10 ನೇ ಬಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಅಜ್ಜಿ ಮುಂದಾದರೂ ತಮ್ಮ ದಂಧೆಯಿಂದ ಹೊರಬರಲಿ.