ತಮಿಳುನಾಡಿದ ದೇವರಾಜನ್ ಎಂಬ ಈ ರೈತ ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ.  88ನೇ ವರ್ಷಕ್ಕೆ ಮರ್ಸಿಡಿಸ್ ಬೆಂಜ್ ಕಾರು ಖರೀದಿಸಿ ಮಾಡಿದ್ದಾರೆ. 

ಚೆನ್ನೈ:  ಯಾವ ವ್ಯಕ್ತಿಗೆ ಆಗಲಿ ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಳ್ಳುವುದೇ ದೊಡ್ಡ ಸಾಧನೆಯಾಗಿರುತ್ತದೆ. ಕೆಲವರಿಗೆ ಈ ಕನಸು ನನಸಾದರೆ ಇನ್ನು ಅನೇಕರಿಗೆ ಈ ನನಸು ಮಾಡಿಕೊಳ್ಳುವುದು ಕಷ್ಟವಾಗಲಿದೆ. 

ಆದರೆ ತಮಿಳುನಾಡಿದ ದೇವರಾಜನ್ ಎಂಬ ಈ ರೈತ ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ. 88ನೇ ವರ್ಷಕ್ಕೆ ಮರ್ಸಿಡಿಸ್ ಬೆಂಜ್ ಕಾರು ಖರೀದಿಸಿ ಮಾಡಿದ್ದಾರೆ. 

ಒಟ್ಟು 33 ಲಕ್ಷ ಮೊತ್ತದ ಬೆಂಜ್ ಕಾರನ್ನು ಖರೀದಿ ಮಾಡಿದ್ದಾರೆ. ಈ ಬಗ್ಗೆ ಬೆಂಜ್ ಕಾರ್ ಡೀಲರ್ ಶಿಪ್ ನೆಟ್ ವರ್ಕ್ ಟ್ರಾನ್ಸ್ ಕಾರ್ ಇಂಡಿಯಾ ಈ ವಿಡಿಯೋ ವನ್ನು ಯೂ ಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದೆ. 

8 ವರ್ಷದವರಿದ್ದಾಗಲೇ ದೇವರಾಜ್ ಅವರಿಗೆ ಬೆಂಜ್ ಕಾರನ್ನು ಖರೀದಿ ಮಾಡುವ ಬಗ್ಗೆ ಕನಸನ್ನು ಕಂಡಿದ್ದರು. ಅದು ಅವರ 88ನೇ ವಯಸ್ಸಿಗೆ ನನಸಾಗಿದೆ.