ನ.23ರಂದು ಈ ಘಟನೆ ನಡೆದಿದ್ದು ಅಲ್ಲಿನ ಸ್ಥಳೀಯ ವಿದ್ಯಾರ್ಥಿ ಸಂಘಟನೆ ಪೊಲೀಸರಿಗೆ ದೂರು ಸಲ್ಲಿಸಿದ್ದು ಎಫ್'ಐ'ಆರ್ ದಾಖಲಾಗಿದೆ.
ಇಟಾನಗರ(ನ.30): ಮುಖ್ಯ ಶಿಕ್ಷಕರ ವಿರುದ್ಧ ಕೆಟ್ಟದಾಗಿ ಬರದ ಕಾರಣಕ್ಕಾಗಿ 88 ವಿದ್ಯಾರ್ಥಿನಿಯರ ಬಟ್ಟೆಯನ್ನು ಮೂವರು ಶಿಕ್ಷಕರು ಬಲವಂತವಾಗಿ ಬಿಚ್ಚಿಸಿ ಅಮಾನವೀಯ ಕೃತ್ಯ ಮೆರೆದ ಘಟನೆ ಅರುಣಾಚಲ ಪ್ರದೇಶ ಪಾಪುಂ ಪರ್ರೆ ಜಿಲ್ಲೆಯ ಗಾಂಧಿ ಬಾಲಿಕ ವಿದ್ಯಾಲಯದಲ್ಲಿ ನಡೆದಿದೆ.
ಬಟ್ಟೆ ಬಿಚ್ಚಿದ ವಿದ್ಯಾರ್ಥಿಗಳೆಲ್ಲರೂ 6 ಹಾಗೂ 7ನೇ ವಿದ್ಯಾರ್ಥಿಗಳಾಗಿದ್ದಾರೆ. ನ.23ರಂದು ಈ ಘಟನೆ ನಡೆದಿದ್ದು ಅಲ್ಲಿನ ಸ್ಥಳೀಯ ವಿದ್ಯಾರ್ಥಿ ಸಂಘಟನೆ ಪೊಲೀಸರಿಗೆ ದೂರು ಸಲ್ಲಿಸಿದ್ದು ಎಫ್'ಐ'ಆರ್ ದಾಖಲಾಗಿದೆ. ಮುಖ್ಯ ಶಿಕ್ಷಕರು ಹಾಗೂ ಓರ್ವ ವಿದ್ಯಾರ್ಥಿನಿಯ ವಿರುದ್ಧ ಕೆಟ್ಟ ಬಾಷೆ ಪ್ರಯೋಗಿಸಿದ ಕಾರಣ ಇಬ್ಬರು ಸಹಾಯಕ ಹಾಗೂ ಓರ್ವ ಕಿರಿಯ ಶಿಕ್ಷಕ ಈ ಕೃತ್ಯವೆಸಗಿದ್ದಾರೆ.
ಬಟ್ಟೆ ಬಿಚ್ಚಿಸಿದ ಪ್ರಕರಣವನ್ನು ಹಲವು ವಿದ್ಯಾರ್ಥಿ ಸಂಘಟನೆಗಳು ಖಂಡಿಸಿದ್ದು ಶಿಕ್ಷಕರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
(ಸಾಂದರ್ಭಿಕ ಚಿತ್ರ)
