2018ರಲ್ಲಿ 831 ಮಂದಿ 1,000 ಕೋಟಿ ರು.ಗಿಂತ ಹೆಚ್ಚಿನ ಆಸ್ತಿ ಹೊಂದಿದ್ದು, ಭಾರತದ ಜಿಡಿಪಿ ಮೌಲ್ಯದ ಕಾಲು ಭಾಗದಷ್ಟುಆಸ್ತಿಯನ್ನು ಇವರು ಹೊಂದಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಮುಂಬೈ: ಭಾರತದಲ್ಲಿ ಆರ್ಥಿಕ ಅಸಮಾನತೆ ಹೆಚ್ಚುತ್ತಿರುವ 1000 ಕೋಟಿ ರು.ಗಳಿಗಿಂತ ಹೆಚ್ಚಿನ ಆಸ್ತಿ ಹೊಂದಿರುವ ಭಾರತೀಯರ ಸಂಖ್ಯೆ ಶೇ.34ರಷ್ಟುಏರಿಕೆಯಾಗಿದೆ. 2018ರಲ್ಲಿ 831 ಮಂದಿ 1,000 ಕೋಟಿ ರು.ಗಿಂತ ಹೆಚ್ಚಿನ ಆಸ್ತಿ ಹೊಂದಿದ್ದು, ಭಾರತದ ಜಿಡಿಪಿ ಮೌಲ್ಯದ ಕಾಲು ಭಾಗದಷ್ಟುಆಸ್ತಿಯನ್ನು ಇವರು ಹೊಂದಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ 3.71 ಲಕ್ಷ ಕೋಟಿ ರು. ನಿವ್ವಳ ಆಸ್ತಿಯೊಂದಿಗೆ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ ಎಂದು ಬಾಕ್ಲೇರ್‍ಸ್‌ ಹರೂನ್‌ ಇಂಡಿಯಾ ಶ್ರೀಮಂತರ ಪಟ್ಟಿತಿಳಿಸಿದೆ. 2017ರ ಶ್ರೀಮಂತರ ಪಟ್ಟಿಗೆ ಹೋಲಿಸಿದರೆ 2018ರಲ್ಲಿ 214 ಮಂದಿ ಆಗರ್ಭ ಶ್ರೀಮಂತರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

2016ರಿಂದ 2018ರ ಅವಧಿಯಲ್ಲಿ 1000 ಕೋಟಿ ರು.ಗಿಂತ ಹೆಚ್ಚಿನ ಆಸ್ತಿ ಹೊಂದಿರುವ ಆಗರ್ಭ ಶ್ರೀಮಂತರ ಸಂಖ್ಯೆ ದುಪ್ಪಟ್ಟಾಗಿದ್ದು, 339ರಿಂದ 831ಕ್ಕೆ ಏರಿಕೆಯಾಗಿದೆ. ಆಗರ್ಭ ಶ್ರೀಮಂತರ ಸರಾಸರಿ ವಯಸ್ಸು 60 ವರ್ಷ, ಓಯೋ ರೂಮ್ಸ್‌ನ ರಿತೇಶ್‌ ಅಗರ್‌ವಾಲ್‌ (24 ವರ್ಷ), ಎಂಡಿಎಚ್‌ ಮಸಾಲಾದ ಧರ್ಮಪಾಲ್‌ ಗುಲಾಟಿ (95) ಅತ್ಯಂತ ಹಿರಿಯ ಶ್ರೀಮಂತರಾಗಿದ್ದಾರೆ. ಭಾರೀ ಶ್ರೀಮಂತರಲ್ಲಿ ಔಷಧ ವಲಯದ ಪಾಲು ಶೇ.13.7, ಸಾಫ್ಟ್‌ವೇರ್‌ ಉದ್ಯಮಿಗಳ ಪಾಲು ಶೇ.7.9, ದಿನಬಳಕೆ ಉತ್ಪನ್ನ ತಯಾರಕರ ಪಾಲು ಶೇ.6.4 ಇದೆ.

ಬೆಂಗಳೂರು ನಂ.3: 233 ಜನರೊಂದಿಗೆ ಅತಿ ಹೆಚ್ಚು ಆಗರ್ಭ ಶ್ರೀಮಂತರನ್ನು ಹೊಂದಿದ ನಗರವಾಗಿದೆ. 163 ಶ್ರೀಮಂತರೊಂದಿಗೆ ದೆಹಲಿ 2 ಮತ್ತು 70 ಶ್ರೀಮಂತರೊಂದಿಗೆ ಬೆಂಗಳೂರು 3ನೇ ಸ್ಥಾನದಲ್ಲಿದೆ.