Asianet Suvarna News Asianet Suvarna News

ದೇಶದ ಶೇ.82ರಷ್ಟು ಎಟಿಎಂಗಳು ಖಾಲಿ ಖಾಲಿ.. ಆರ್`ಬಿಐ ಕೊಟ್ಟ ಹಣ ಎಲ್ಲಿ ಹೋಗುತ್ತಿದೆ ಗೊತ್ತಾ..?

ನೋಟ್ ಬ್ಯಾನ್ ಆಗಿ ಹತ್ತಿರತ್ತಿರ ತಿಂಗಳು ಕಳೆಯುತ್ತಾ ಬಂದರೂ ಜನರ ಹಣದ ಗೊಂದಲ ಕಡಿಮೆ ಆಗಿಲ್ಲ. ಅಕೌಂಟ್`ಗೆ ಬಿದ್ದಿರುವ ಸಂಬಳದ ಹಣವೂ ಜನರಿಗೆ ಸಿಗುತ್ತಿಲ್ಲ.

82 percent ATMs dry because government used that money to pay its own employees

ನವದೆಹಲಿ(ಡಿ.01): ದೇಶಾದ್ಯಂತ 1.66 ಲಕ್ಷ ಎಟಿಎಂಗಳಿವೆ. ಆದರೆ, ಇದರಲ್ಲಿ ಶೇ.82ರಷ್ಟು ಎಟಿಎಂಗಳು ಬಾಗಿಲು ಮುಚ್ಚಿವೆ. ಸಂಬಳದ ದಿನವಾದರೂ ಹಣ ಸಿಗುತ್ತಿಲ್ಲ.

ಹೌದು, ಕ್ಯಾಶ್ ರಶ್ ತಪ್ಪಿಸಲು ಕೇಂದ್ರ ಸರ್ಕಾರ ಆರ್`ಬಿಐನಿಂದ ರಿಲೀಸ್ ಆಗಿರುವ ಹೆಚ್ಚಿನ ಪ್ರಮಾಣದ ಹಣವನ್ನ ತನ್ನ ಉದ್ಯೋಗಿಗಳಿಗೆ ಕ್ಯಾಶ್ ನೀಡಲು ನಿರ್ಧರಿಸಿದೆ. 42 ಲಕ್ಷದಷ್ಟಿರುವ ಕೇಂದ್ರಸರ್ಕಾರದ ಸಿ ಮತ್ತು ಡಿ ಗ್ರೂಪ್ ನೌಕರರಿಗೆ 10 ಸಾವಿರ ರೂಪಾಯಿಯನ್ನ ಕ್ಯಾಶ್`ನಲ್ಲಿ ನೀಡುತ್ತಿದೆ. ಇದರಿಂದಾಗಿ 4170 ಕೋಟಿ ನಗದು ಕೇಂದ್ರದ ನೌಕರರಿಗೇ ಹೋಗುತ್ತಿದೆ. ಹೀಗಾಗಿ, ಎಟಿಎಂಗಳಿಗೆ ಹಣ ತಲುಪಿಲ್ಲ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ನೋಟ್ ಬ್ಯಾನ್ ಆಗಿ ಹತ್ತಿರತ್ತಿರ ತಿಂಗಳು ಕಳೆಯುತ್ತಾ ಬಂದರೂ ಜನರ ಹಣದ ಗೊಂದಲ ಕಡಿಮೆ ಆಗಿಲ್ಲ. ಅಕೌಂಟ್`ಗೆ ಬಿದ್ದಿರುವ ಸಂಬಳದ ಹಣವೂ ಜನರಿಗೆ ಸಿಗುತ್ತಿಲ್ಲ.