ಸೇನೆಯು ಹಿಜ್ಬುಲ್ ಮುಜಾಯಿದ್ದೀನ್ ಭಯೋತ್ಪಾಕ ಸಂಘಟನೆಯ ಸಬ್ಜರ್ ಭಟ್ ಹತ್ಯೆಯ ಹಿನ್ನಲೆಯಲ್ಲಿ ಕಾಶ್ಮೀರ ಬಂದ್'ಗೆ ಕರೆ ನೀಡಲಾಗಿತ್ತು. ಈ ಅಭ್ಯರ್ಥಿ'ಗಳು ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಈ ಮೊದಲು ಉತ್ತೀರ್ಣ'ರಾಗಿದ್ದರು.
ಶ್ರೀನಗರ(ಮೇ.28): ಕಾಶ್ಮೀರದಲ್ಲಿ ಬಂದ್ ಇದ್ದರೂ ವಿವಿಧ ಹುದ್ದೆಗಳಿಗೆ ಭಾರತೀಯ ಸೇನೆ ಕರೆದಿದ್ದ ಪರೀಕ್ಷೆಗೆ 815 ಮಂದಿಯಲ್ಲಿ ಸುಮಾರು 800 ಮಂದಿ ಹಾಜರಾಗಿರುವುದು ಅಚ್ಚರಿ ಮೂಡಿಸಿದೆ.
ಸೇನೆಯು ಹಿಜ್ಬುಲ್ ಮುಜಾಯಿದ್ದೀನ್ ಭಯೋತ್ಪಾಕ ಸಂಘಟನೆಯ ಸಬ್ಜರ್ ಭಟ್ ಹತ್ಯೆಯ ಹಿನ್ನಲೆಯಲ್ಲಿ ಕಾಶ್ಮೀರ ಬಂದ್'ಗೆ ಕರೆ ನೀಡಲಾಗಿತ್ತು. ಈ ಅಭ್ಯರ್ಥಿ'ಗಳು ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಈ ಮೊದಲು ಉತ್ತೀರ್ಣ'ರಾಗಿದ್ದರು. ಆದರೆ ಬಂದ್ ಇದ್ದರೂ 815 ಪರೀಕ್ಷಾರ್ಥಿ'ಗಳಲ್ಲಿ 799 ಮಂದಿ ಹಾಜರಾಗಿರುವುದು ಸೇನೆಗೆ ಸಂತಸ ಮೂಡಿಸಿದೆ.
ಜಮ್ಮು-ಕಾಶ್ಮೀರ ಗಡಿಯಲ್ಲಿನ ಉಗ್ರರ ದಮನಕ್ಕೆ ಭಾರತೀಯ ಸೇನೆ ಹೊಸ ಮಾರ್ಗ ಹುಡುಕಿದ್ದು, ಸ್ಥಳೀಯ ಯುವಕರನ್ನೇ ಸೈನ್ಯಕ್ಕೆ ನೇಮಕಮಾಡಿಕೊಂಡು ಆ ಮೂಲಕ ಉಗ್ರ ಚಟುವಟಿಕೆಗೆಗೆ ಮಟ್ಟಹಾಕಲು ಮುಂದಾಗಿದೆ. ಇದು ಒಂದು ರೀತಿಯಲ್ಲಿ ಆಶಾದಾಯಕ ಬೆಳವಣಿಗೆ ಕೂಡ.
