ಅಮೃತಧರ ಈಗ ಎಂಟು ವರ್ಷದ ಹುಡುಗ. ಆದರೆ ಮಾಡಿರುವ ಸಾಧನೆ ಮಾತ್ರ ಚಿನ್ನದಂತದ್ದು. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ ಚಿಕ್ಕಂದಿನಿಂದಲೇ ಕ್ರೀಡೆಗಳಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡ ಅಮೃತಧರ ಮೊದಲು ಸ್ಕೆಟ್ಟಿಂಗ್, ಚೆಸ್ ಮೊದಲಾದ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾಗ ಗೆಳೆಯರು ಕರಾಟೆ ಡ್ರೆಸ್ ಹಾಕಿ ಕರಾಟೆ ಕಲಿಯುಲು ಹೋಗುತ್ತಿದ್ದದ್ದು ಅಪಾರವಾಗಿ ಆಕರ್ಷಿಸುತ್ತೆ. ಈ ಆಕರ್ಷಣೆಯ ಪರಿಣಾಮವೇ ಇಂದು ಅವನು ಚಿನ್ನದ ಬೇಟೆಯಾಡಿ ಇತರ ಮಕ್ಕಳಿಗೆ ಮಾದರಿಯಾಗಿದ್ದಾನೆ.

ಬೆಂಗಳೂರು (ಜ.2): ಅಮೃತಧರ ಈಗ ಎಂಟು ವರ್ಷದ ಹುಡುಗ. ಆದರೆ ಮಾಡಿರುವ ಸಾಧನೆ ಮಾತ್ರ ಚಿನ್ನದಂತದ್ದು. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ ಚಿಕ್ಕಂದಿನಿಂದಲೇ ಕ್ರೀಡೆಗಳಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡ ಅಮೃತಧರ ಮೊದಲು ಸ್ಕೆಟ್ಟಿಂಗ್, ಚೆಸ್ ಮೊದಲಾದ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾಗ ಗೆಳೆಯರು ಕರಾಟೆ ಡ್ರೆಸ್ ಹಾಕಿ ಕರಾಟೆ ಕಲಿಯುಲು ಹೋಗುತ್ತಿದ್ದದ್ದು ಅಪಾರವಾಗಿ ಆಕರ್ಷಿಸುತ್ತೆ. ಈ ಆಕರ್ಷಣೆಯ ಪರಿಣಾಮವೇ ಇಂದು ಅವನು ಚಿನ್ನದ ಬೇಟೆಯಾಡಿ ಇತರ ಮಕ್ಕಳಿಗೆ ಮಾದರಿಯಾಗಿದ್ದಾನೆ.

ದೇಶದ ಪ್ರತಿಷ್ಠಿತ ಬುಡೋಕಾನ್ ಕರಾಟೆ ಸಂಸ್ಥೆಯವರು ಏರ್ಪಡಿಸಿದ್ದ ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್ 2017ರಲ್ಲಿ ಭಾಗವಹಿಸಿದ್ದ ಅಮೃತಧರ 8 ವರ್ಷದೊಳಗಿನ ವಯಕ್ತಿಕ ಕುಮ್ಟೆ ಸ್ಪರ್ಧೆಯಲ್ಲಿ ಚಿನ್ನದ ಬೇಟೆಯಾಡಿದ್ದಾನೆ. ಇದಿಷ್ಟೇ ಅಲ್ಲದೇ ವೈಯಕ್ತಿಕ ಕಾಟಾ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾನೆ. ವಿಶೇಷ ಎಂದರೆ ದೇಶದಲ್ಲೇ ಇಷ್ಟು ಚಿಕ್ಕ ವಯಸ್ಸಿನಲ್ಲಿ ಕರಾಟೆಯಲ್ಲಿ ಚಿನ್ನ ಪಡೆದ ಕೆಲವೇ ಕೆಲವು ಮಂದಿಯಲ್ಲಿ ಅಮೃತಧರನೂ ಸ್ಥಾನ ಪಡೆದಿರುವುದು.

ಬ್ಲಾಕ್ ಬೆಲ್ಟ್ ಅಮೃತಧರನ ಕನಸು: ಸದ್ಯ ಗ್ರೀನ್ ಬೆಲ್ಟ್‌ನಲ್ಲಿರುವ ಅಮೃತಧರ ಕರಾಟೆಯ ಪ್ರತಿಷ್ಠಿತ ಬ್ಲಾಕ್ ಬೆಲ್ಟ್ ಪಡೆಯಲೇಬೇಕು ಎನ್ನುವ ಹಂಬಲದೊಂದಿಗೆ ನಿರಂತರ ಪ್ರಯತ್ನ ಮಾಡುತ್ತಲೇ ಇದ್ದಾನೆ. ನಿಯಮಗಳ ಪ್ರಕಾರ ಕರಾಟೆಯಲ್ಲಿ ಕೊನೆಯ ಬ್ಲಾಕ್ ಬೆಲ್ಟ್ ಪಡೆದುಕೊಳ್ಳಲು ಕನಿಷ್ಠ ಐದು ವರ್ಷಗಳು ಬೇಕೇ ಬೇಕು. ಈಗ ನನ್ನ ಮಗ ಎರಡು ವರ್ಷಗಳನ್ನು ಕರಾಟೆಯಲ್ಲಿ ಪೂರೈಸಿ ಮೂರನೇ ಗ್ರೀನ್ ಬೆಲ್ಟ್ ಪಡೆದುಕೊಂಡಿದ್ದಾನೆ. ಅವನ ನಿರಂತರ ಅಭ್ಯಾಸವನ್ನು ನೋಡಿದರೆ ಮುಂದಿನ ಮೂರು ವರ್ಷಗಳಲ್ಲಿ ಬ್ಲಾಕ್ ಬೆಲ್ಟ್ ಪಡೆದುಕೊಳ್ಳುತ್ತಾನೆ ಎನ್ನುವ ತಾಯಿ ವನಿತಾ ಅವರು ಮಗನ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಕರಾಟೆ ನಮ್ಮಲ್ಲಿ ಇದೀಗ ತಾನೆ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿರುವ ಕ್ರೀಡೆ. ಚೀನಾ, ನೇಪಾಳ ಸೇರಿದಂತೆ ಹಲವಾರು ದೇಶಗಳಲ್ಲಿ ಹೆಚ್ಚು ಪ್ರಸಿದ್ಧವಾಗಿರುವ ಇದಕ್ಕೆ ನಮ್ಮಲ್ಲಿ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಕ್ಕರೆ ಅಮೃತಧರನಂತಹ ಬಾಲ ಪ್ರತಿಭೆಗಳಿಗೆ ಅನುಕೂಲವಾಗುತ್ತದೆ. ಚಿಕ್ಕ ವಯಸ್ಸಿನಲ್ಲಿಯೂ ಚಿನ್ನದ ಭೇಟೆಯಾಡಿ ರಾಜ್ಯದ ಕೀರ್ತಿಯನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸುತ್ತಿರುವ ಅಮೃತಧರನಿಗೆ ನಿಮ್ಮ ಕಡೆಯಿಂದಲೂ ಒಂದು ಮೆಚ್ಚುಗೆ ಇರಲಿ.