ಎಂಟು ಕನ್ನಡ ಚಿತ್ರಗಳ ಬಿಡುಗಡೆ ಸ್ಥಗಿತ

8 kannada movies release stopped
Highlights

ದಕ್ಷಿಣ ಭಾರತೀಯ ಚಿತ್ರರಂಗ ಯುಓಫ್‌ಓ ಮತ್ತು ಕ್ಯೂಬ್ ಸಂಸ್ಥೆಗಳ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗೆ ಕನ್ನಡ ಚಿತ್ರರಂಗ ಮಾರ್ಚ್ 9 ರಿಂದ ಕೈ ಜೋಡಿಸಲು ನಿರ್ಧರಿಸಿದೆ. ಇದರ ಪರಿಣಾಮವಾಗಿ, ಮಾರ್ಚ್
9 ರಂದು ಬಿಡುಗಡೆಯಾಗಬೇಕಾಗಿದ್ದ 8 ಸಿನಿಮಾಗಳು ತೆರೆಕಾಣುತ್ತಿಲ್ಲ.

ಬೆಂಗಳೂರು (ಮಾ. 04): ದಕ್ಷಿಣ ಭಾರತೀಯ ಚಿತ್ರರಂಗ ಯುಓಫ್‌ಓ ಮತ್ತು ಕ್ಯೂಬ್ ಸಂಸ್ಥೆಗಳ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗೆ ಕನ್ನಡ ಚಿತ್ರರಂಗ ಮಾರ್ಚ್ 9 ರಿಂದ ಕೈ ಜೋಡಿಸಲು ನಿರ್ಧರಿಸಿದೆ. ಇದರ ಪರಿಣಾಮವಾಗಿ, ಮಾರ್ಚ್
9 ರಂದು ಬಿಡುಗಡೆಯಾಗಬೇಕಾಗಿದ್ದ 8 ಸಿನಿಮಾಗಳು ತೆರೆಕಾಣುತ್ತಿಲ್ಲ.

ತಮಿಳು ಮತ್ತು ತೆಲುಗು ಚಿತ್ರರಂಗಗಳು ಮಾರ್ಚ್ 2 ರಿಂದಲೇ ಸಿನಿಮಾಗಳ ಬಿಡುಗಡೆಯನ್ನು  ತಡೆ ಹಿಡಿದಿದ್ದವು. ಪ್ರಚಾರಕ್ಕೆ ಸಾಕಷ್ಟು ಹಣ ವೆಚ್ಚ  ಮಾಡಲಾಗಿದೆ ಎಂಬ ನಿರ್ಮಾಪಕರ ಒತ್ತಾಯಕ್ಕೆ ಮಣಿದು ಕನ್ನಡ ಚಿತ್ರರಂಗ ಪ್ರತಿಭಟನೆಯನ್ನು
ಒಂದು ವಾರದ ಕಾಲ ಮುಂದೂಡಿತ್ತು. ಇದೀಗ ಎಂಟು ಚಿತ್ರಗಳ ನಿರ್ಮಾಪಕರು ಸ್ವಯಿಚ್ಛೆಯಿಂದಲೇ ಸಿನಿಮಾ ಬಿಡುಗಡೆ ಮಾಡದಿರಲು ನಿರ್ಧರಿಸಿ, ಹೋರಾಟಕ್ಕೆ ಬೆಂಬಲ ಘೋಷಿಸಿದ್ದಾರೆ. ಇದರಿಂದಾಗಿ ಮಾರ್ಚ್ 9 ರ ಶುಕ್ರವಾರ ಯಾವುದೇ ಕನ್ನಡ  ಸಿನಿಮಾಗಳು ತೆರೆ ಕಾಣುತ್ತಿಲ್ಲ.

ಕ್ಯೂಬ್ ಮತ್ತು ಐಎಫ್‌ಓ ಸಂಸ್ಥೆಗಳು ಸ್ಯಾಟಲೈಟ್ ತಂತ್ರಜ್ಞಾನದ ಮೂಲಕ ಚಿತ್ರಪ್ರದರ್ಶನಕ್ಕೆ ಅನುವು ಮಾಡಿಕೊಡಲು ವಿಧಿಸುತ್ತಿರುವ ಶುಲ್ಕ ದುಬಾರಿಯಾಗಿದೆ. ಈ ಸೇವಾಶುಲ್ಕವನ್ನು ಕಡಿತ ಮಾಡಬೇಕು ಎಂದು ದಕ್ಷಿಣ ಭಾರತೀಯ
ಚಿತ್ರೋದ್ಯಮ ಡಿಜಿಟಲ್ ಸೇವಾ ನಿರತರ ಬಳಿ ಮನವಿ ಮಾಡಿಕೊಂಡಿತ್ತು. ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಬರದೇ ಇರುವ ಹಿನ್ನೆಲೆಯಲ್ಲಿ ಚಿತ್ರದ
ಬಿಡುಗಡೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿತ್ತು.
 

ಯಾವ್ಯಾವ ಸಿನಿಮಾ?:

ಮಾರ್ಚ್ 9 ರಂದು ಬಿಡುಗಡೆಗೆ ಸಿದ್ಧವಾಗಿದ್ದ ಸಿನಿಮಾಗಳ ಪಟ್ಟಿ ಹೀಗಿದೆ. ಯೋಗೇಶ್ ನಟನೆಯ ‘ಯೋಗಿ ದುನಿಯಾ’, ಮನೋಜ್ ನಟನೆಯ ‘ಓ ಪ್ರೇಮವೇ’, ಪೂಜಾ ಗಾಂಧಿ ಪ್ರಮುಖ ಪಾತ್ರದಲ್ಲಿರುವ ‘3’, ಸಿಂಧು ಲೋಕನಾಥ್ ಅಭಿನಯಿಸಿರುವ ‘ಹೀಗೊಂದು ದಿನ’ ಹಾಗೂ ಹೊಸಬರ ಚಿತ್ರಗಳಾದ ‘ನನಗಿಷ್ಟ’, ‘ಇದಂ ಪ್ರೇಮಂ ಜೀವನಂ’ ಮತ್ತು ‘ಮುಖ್ಯಮಂತ್ರಿ ಕಳದೋದ್ನಪ್ಪೊ’. ಇವುಗಳನ್ನು ಬಿಡುಗಡೆ ಮಾಡದಿರಲು ಆಯಾ ಚಿತ್ರಗಳ ನಿರ್ಮಾಪಕರೇ ನಿರ್ಧರಿಸಿದ್ದಾರೆ.

loader