ರಾಜಕೀಯ ದ್ವೇಷಕ್ಕೆ 8 ಕೋಟಿ ರೂ. ವೆಚ್ಛದ ಕಟ್ಟಡ ನೆಲಸಮ| ಹಾಲಿ ಮತ್ತು ಮಾಜಿ ಸಿಎಂ ನಡುವಿನ ರಾಜಕೀಯ ಕದ ತಾರಕಕ್ಕೆ| ನೆರೆಯ ಆಂಧ್ರದಲ್ಲಿ ಗರಿ ಬಿಚ್ಚಿದ ರಾಜಕೀಯ ದ್ವೇಷ| ಟಿಡಿಪಿ ಪಕ್ಷದ ಪ್ರಜಾವೇದಿಕೆ ಕಟ್ಟಡ ನೆಲಸಮ| ಮರಾವತಿಯಲ್ಲಿ 8 ಕೋಟಿ ರೂ. ವೆಚ್ಛದಲ್ಲಿ ನಿರ್ಮಿಸಲಾಗಿದ್ದ ಟಿಡಿಪಿ ಕಟ್ಟಡ| ಜಗನ್ ಮೋಹನ್ ರೆಡ್ಡಿ, ಚಂದ್ರಬಾಬು ನಾಯ್ಡು ನಡುವಿನ ಕದನ| ಕಟ್ಟಡ ನೆಲಸಮ ಮಾಡಿದ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ| 

ಅಮರಾವತಿ(ಜೂ.26): ರಾಜಕೀಯ ದ್ವೇಷವನ್ನೇ ಉಸಿರಾಡುವ ನೆರೆಯ ಆಂಧ್ರದಲ್ಲಿ ಹಾಲಿ ಮತ್ತು ಮಾಜಿ ಸಿಎಂ ನಡುವಿನ ವೈಮನಸ್ಸು ತಾರಕಕ್ಕೇರಿದೆ.

ನೂತನ ಸಿಎಂ ಸಿಎಂ ಜಗನ್ ಮೋಹನ್ ರೆಡ್ಡಿ ಮತ್ತು ಮಾಜಿ ಸಿಎಂ ಚಂದ್ರಬಾಬು ನಾಯ್ಡು ನಡುವಿನ ರಾಜಕೀಯ ಕದನದಲ್ಲಿ ಟಿಡಿಪಿಯ ಕಟ್ಟವೊಂದು ನೆಲಸಮವಾಗಿದೆ.

Scroll to load tweet…

ಹೌದು, ಆಂಧ್ರದ ನೂತನ ರಾಜಧಾನಿ ಅಮರಾವತಿಯಲ್ಲಿ ಸುಮಾರು 8 ಕೋಟಿ ರೂ. ವೆಚ್ಛದಲ್ಲಿ ನಿರ್ಮಿಸಲಾಗಿದ್ದ ಟಿಡಿಪಿ ಕಚೇರಿ 'ಪ್ರಜಾವೇದಿಕಾ' ಕಟ್ಟಡವನ್ನು ಆಂಧ್ರ ಸರ್ಕಾರ ಧರೆಗುರುಳಿಸಿದೆ.

ನಾಯ್ಡುಗೆ ಆಘಾತ: ಸಿಎಂ ಕುರ್ಚಿ ಹೋಯ್ತು, ಈಗ ಮನೆಯೂ ಕಳೆದುಕೊಳ್ಳುವ ಸರದಿ!

ನೂತನ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಸರ್ಕಾರ ರಚನೆ ಬಳಿಕ, ನಾಯ್ಡು ವಿರುದ್ಧ ಕೈಗೊಂಡ ಮೊದಲ ಕ್ರಮ ಇದಾಗಿದ್ದು ನಿನ್ನೆ(ಮಂಗಳವಾರ)ರಾತ್ರಿಯೇ ಕಟ್ಟಡ ನೆಲಸಮ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

Scroll to load tweet…

ಆಂಧ್ರಪ್ರದೇಶದ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಸಿಆರ್‌ಡಿಎ) ಕಟ್ಟಡವವನ್ನು ಸಂಪೂರ್ಣ ಕೆಡವಿ ಹಾಕಿದೆ. ಅಕ್ರಮವಾಗಿ ಈ ಕಟ್ಟಡವನ್ನು ಕಟ್ಟಲಾಗಿದ್ದು, ಈ ಹಿನ್ನೆಲೆಯಲ್ಲಿ ನೆಲಸಮ ಮಾಡಲಾಗಿದೆ ಎಂದು ಸಿಆರ್‌ಡಿಎ ಸ್ಪಷ್ಟಪಡಿಸಿದೆ.

ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ನಿವಾಸದ ಸಮೀಪದಲ್ಲೇ ಪ್ರಜಾ ವೇದಿಕೆ ಕಟ್ಟಡವನ್ನು 8 ಕೋಟಿ ರೂ. ವೆಚ್ಛದಲ್ಲಿ ನಿರ್ಮಿಸಲಾಗಿತ್ತು.