ಕೇರಳ ಪೊಲೀಸ್‌ ಕಾಯ್ದೆಯ 120-ಬಿ ಪರಿ ಚ್ಛೇದದ ಅಡಿ ಇತ್ತೀಚೆಗೆ ಪೊಲೀಸರು ಈ 8 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. 120-ಬಿ ಪ್ರಕಾರ, ಸಾರ್ವಜನಿಕರಿಗೆ ತೊಂದರೆ ಯಾಗುವ ಮತ್ತು ನೋವುಂಟು ಮಾಡುವ ರೀತಿಯಲ್ಲಿ ಯಾವುದೇ ಪ್ರಾಣಿಯನ್ನು ವಧಿಸು ವುದು ಕಾನೂನು ಬಾಹಿರವಾಗಿದ್ದು, ಇದಕ್ಕೆ 1 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರು. ದಂಡ ವಿಧಿಸಲು ಅವಕಾಶವಿದೆ.
ಕಣ್ಣೂರು: ಗೋಹತ್ಯೆ ಕುರಿತ ಕೇಂದ್ರ ಸರ್ಕಾರದ ಅಧಿಸೂಚನೆ ಖಂಡಿಸಿ ಇತ್ತೀಚೆಗೆ ಕೇರಳದ ಕಣ್ಣೂರಿನಲ್ಲಿ ಸಾರ್ವಜನಿಕವಾಗಿ ಎಮ್ಮೆ ಕರು ಕಡಿದು ಪ್ರತಿಭಟನೆ ನಡೆಸಿದ್ದ 8 ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತರಲ್ಲಿ ಕಣ್ಣೂರು ಲೋಕ ಸಭಾ ಕ್ಷೇತ್ರ ಮಂಡಲದ ಯುವ ಕಾಂಗ್ರೆಸ್ ಅಧ್ಯಕ್ಷ ರಿಜಿಲ್ ಮಕ್ಕುಟ್ಟಿಕೂಡ ಸೇರಿದ್ದಾನೆ.
ಕೇರಳ ಪೊಲೀಸ್ ಕಾಯ್ದೆಯ 120-ಬಿ ಪರಿ ಚ್ಛೇದದ ಅಡಿ ಇತ್ತೀಚೆಗೆ ಪೊಲೀಸರು ಈ 8 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. 120-ಬಿ ಪ್ರಕಾರ, ಸಾರ್ವಜನಿಕರಿಗೆ ತೊಂದರೆ ಯಾಗುವ ಮತ್ತು ನೋವುಂಟು ಮಾಡುವ ರೀತಿಯಲ್ಲಿ ಯಾವುದೇ ಪ್ರಾಣಿಯನ್ನು ವಧಿಸು ವುದು ಕಾನೂನು ಬಾಹಿರವಾಗಿದ್ದು, ಇದಕ್ಕೆ 1 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರು. ದಂಡ ವಿಧಿಸಲು ಅವಕಾಶವಿದೆ.
ಇದರ ಜೊತೆಗೆ ಬಂಧಿತರ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆ-1960ಯ 2 ಪರಿಚ್ಛೇದಗಳು, ಐಪಿಸಿ ಸೆಕ್ಷನ್ 143 (ಅಕ್ರಮವಾಗಿ ಗುಂಪುಗೂಡುವುದು), 147 (ದಂಗೆ), 149 ಅಡಿ ಪ್ರಕರಣ ಹಾಕಲಾಗಿದೆ.
