ಅಪ್ರಾಪ್ತರೊಂದಿಗೆ ಮದುವೆ : 8 ಅರಬ್ ವೃದ್ಧ ಶೇಖ್'ಗಳ ಬಂಧನ

ಹೈದರಾಬಾದ್(ಸೆ.20): ಅಪ್ರಾಪ್ತ ಹೆಣ್ಣು ಮಕ್ಕಳ ಮದುವೆಯ ಜಾಲವನ್ನು ಬೇಧಿಸಿರುವ ಹೈದರಾಬಾದ್ ಪೊಲೀಸರು 8 ಅರಬ್ ಶೇಖ್'ಗಳನ್ನು ಬಂಧಿಸಿದ್ದಾರೆ.

ಬಂಧಿತರಲ್ಲಿ ಒಮನ್,ಕತಾರ್ ದೇಶದ 8 ನಾಗರಿಕರು ಮೂವರು ಖ್ವಾಜಿಗಳು,ನಾಲ್ವರು ಲಾಡ್ಜ್ ಮಾಲೀಕರು ಹಾಗೂ ಐವರು ದಲ್ಲಾಳಿಗಳಿದ್ದಾರೆ. ಅರಬ್ ಶೇಖ್'ಗಳು ದಲ್ಲಾಳಿಗಳು, ಕ್ವಾಜಿಗಳು ಹಾಗೂ ಲಾಡ್ಜ್ ಮಾಲೀಕರ ಸಹಾಯದಿಂದ ಹಣದ ಆಮಿಷ ನೀಡಿ ಅಪ್ರಾಪ್ತ ಹೆಣ್ಣುಮಕ್ಕಳನ್ನು ಮದುವೆಯಾಗುತ್ತಿದ್ದರು.

ಮಹಿಳೆಯೊಬ್ಬಳು ತನ್ನ ಪತಿ 70 ವರ್ಷದ ದುಬೈ ಶೇಖ್ ಜೊತೆ ಅಪ್ರಾಪ್ತ ಹೆಣ್ಣುಮಗಳ ಮದುವೆಗೆ ಸಹಕಾರ ನೀಡಿದ್ದಾನೆ ಎಂಬುದಾಗಿ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ಬಯಲಿಗೆ ಬಂದಿದೆ. ಇಬ್ಬರು ಅಪ್ರಾಪ್ತ ಬಾಲಕಿಯನ್ನು ರಕ್ಷಿಸಲಾಗಿದೆ. ಹೆಚ್ಚಿನ ವಿಚಾರಣೆ ನಡೆಸುತ್ತಿರುವ ಪೊಲೀಸರು ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.