ಬಯಲಲ್ಲಿ ಮಲ ವಿಸರ್ಜನೆ ಮಾಡದಂತೆ ಕುಟುಂಬಕ್ಕೆ ಒಂದು ತಿಂಗಳ ಹಿಂದೆ ಸೂಚಿಸಲಾಗಿತ್ತು. ಆದರೆ ಕುಟುಂಬ ಅದನ್ನು ಕೇಳಿಸಿಕೊಂಡಿಲ್ಲ.

ಮಧ್ಯಪ್ರದೇಶದ ಬೇತುಲ್‌'ನ ಗ್ರಾಮವೊಂದರ ಪಂಚಾಯತ್, ಅಲ್ಲಿನ ಕುಟುಂಬವೊಂದು ಬಯಲಲ್ಲಿ ಮಲ ವಿಸರ್ಜನೆ ಮಾಡಿದುದಕ್ಕೆ 75,000 ರು.ದಂಡ ವಿಧಿಸಿದೆ.ರಂಭಾಖೇಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಬಯಲಲ್ಲಿ ಮಲ ವಿಸರ್ಜನೆ ಮಾಡದಂತೆ ಕುಟುಂಬಕ್ಕೆ ಒಂದು ತಿಂಗಳ ಹಿಂದೆ ಸೂಚಿಸಲಾಗಿತ್ತು. ಆದರೆ ಕುಟುಂಬ ಅದನ್ನು ಕೇಳಿಸಿಕೊಂಡಿಲ್ಲ. ಹೀಗಾಗಿ 10 ಮಂದಿ ಸದಸ್ಯರ ಆ ಕುಟುಂಬಕ್ಕೆ 75 ಸಾವಿರ ರುಪಾಯಿ ದಂಡ ವಿಧಿಸಲಾಗಿದೆ ಎಂದು ಪಂಚಾಯತ್‌'ನ ಉದ್ಯೋಗ ಸಹಾಯಕ ಕನ್ವರ್‌ಲಾಲ್ ಹೇಳಿದ್ದಾರೆ.

ಮಧ್ಯಪ್ರದೇಶ ಪಂಚಾಯತ್ ನಿಯಮಗಳನುಸಾರ, ತಲಾ ಒಬ್ಬರಿಗೆ ದಿನಕ್ಕೆ 250 ರುಪಾಯಿಯಂತೆ, 10 ಜನರಿಗೆ ಒಂದು ತಿಂಗಳಿಗೆ ಇಷ್ಟು ಮೊತ್ತದ ದಂಡ ವಿಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.