ಈ ಬಾರಿ ಮಾಸಿಕ ಪೂಜೆ ಹಿನ್ನೆಲೆಯಲ್ಲಿ ಶಬರಿಮಲೆ ದೇಗುಲವನ್ನು ತೆರೆದಿದ್ದು ಅತ್ಯಧಿಕ ಸಂಖ್ಯೆಯಲ್ಲಿ  ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ನೈಜ ಭಕ್ತರು ಇಲ್ಲಿಗೆ ಭೇಟಿ ನೀಡಿದ್ದರು ಎನ್ನುವ ಸಂಗತಿ ಬೆಳಕಿಗೆ ಬಂದಿದೆ. 

ಶಬರಿಮಲೆ : ಶಬರಿ ಮಲೆ ದೇಗುಲವನ್ನು ಮಾಸಿಕ ಪೂಜೆಯ ಸಲುವಾಗಿ ನವೆಂಬರ್ 5 ಹಾಗೂ 6 ರಂದು ತೆರೆಯಲಾಗಿದ್ದು, ಈ ವೇಳೆ 7300 ಭಕ್ತರು ಶಬರಿಮಲೆಗೆ ಆಗಮಿಸಿದ್ದರು. 

ಆದರೆ ಇಷ್ಟು ಮಂದಿ ಭಕ್ತರಲ್ಲಿ ಕೇವಲ 200 ಮಂದಿ ಮಾತ್ರವೇ ಶ್ರದ್ಧಾ ಭಕ್ತಿಯಿಂದ ದೇವಾಲಯಕ್ಕೆ ಆಗಮಿಸಿದ್ದ ನೈಜ ಭಕ್ತರು ಎನ್ನುವ ವಿಚಾರ ಬೆಳಕಿಗೆ ಬಂದಿದೆ. 

ಪೊಲೀಸರ ವಿಶ್ಲೇಷಣೆ ವೇಳೆಯಲ್ಲಿ ಈ ವಿಚಾರ ತಿಳಿದು ಬಂದಿದ್ದು, ಈ ವೇಳೆ ದೇಗುಲಕ್ಕೆ ಬಿಜೆಪಿ ಹಾಗೂ ಆರ್ ಎಸ್ ಎಸ್ ಕಾರ್ಯಕರ್ತರೂ ಕೂಡ ಆಗಮಿಸಿದ್ದರು ಎನ್ನಲಾಗಿದೆ. 

ಕಳೆದ ತಿಂಗಳೂ ಕೂಡ ಮಾಸಿಕ ಪೂಜೆ ಹಿನ್ನೆಲೆಯಲ್ಲಿ ದೇವಾಲಯದ ಬಾಗಿಲನ್ನು ತೆರೆದಿದ್ದು ಈ ವೇಳೆ ಸಾಕಷ್ಟು ಪ್ರಮಾಣದಲ್ಲಿ ಗಂಭೀರ ಗಲಭೆ ನಡೆದಿತ್ತು. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮಹಿಳೆಯರು ದೇಗುಲವನ್ನು ಪ್ರವೇಶಿಸಲು ಯತ್ನಿಸಿದ್ದರು. ಈ ಬಾರಿಯೂ ಕೂಡ ಗಲಾಟೆ ನಡೆಯಬಹುದಾದ ನಿರೀಕ್ಷೆ ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.