ವಿದ್ಯಾರ್ಥಿನಿಯೊಂದಿಗೆ ಸೆಕ್ಸ್ ಗಾಗಿ ಐ ಫೋನ್ ಆಫರ್ ನೀಡಿದ ಶಿಕ್ಷಕ

First Published 2, Jul 2018, 10:49 AM IST
70 Year Teacher offered 16 year old girl iPhone for sex  AP News
Highlights

70 ವರ್ಷದ ಹೈಸ್ಕೂಲ್ ಶಿಕ್ಷಕನೊಬ್ಬ 16 ವರ್ಷದ ಬಾಲಕಿಗೆ ಐಫೋನ್ ಬೇಕಾದರೆ ತನ್ನೊಂದಿಗೆ ಸೆಕ್ಸ್ ಮಾಡುವಂತೆ ಆಫರ್ ನೀಡಿದ್ದಾನೆ. 

ವಾಷಿಂಗ್ಟನ್ :  ಯಾರಾದರೂ ಬಂದು ಐಫೋನ್ ಕೊಡುತ್ತೇನೆ ಅಂದರೆ ಯಾರಿಗೆ ತಾನೇ ಬೇಡ! ಇದನ್ನೇ ಬಂಡವಾಳ ಮಾಡಿಕೊಂಡ ಅಮೆರಿಕದ 70 ವರ್ಷದ ಹೈಸ್ಕೂಲ್ ಶಿಕ್ಷಕನೊಬ್ಬ 16 ವರ್ಷದ ಬಾಲಕಿಗೆ ಐಫೋನ್ ಬೇಕಾದರೆ ತನ್ನೊಂದಿಗೆ ಸೆಕ್ಸ್ ಮಾಡುವಂತೆ ಆಫರ್ ನೀಡಿದ್ದಾನೆ. 

ಹೈಸ್ಕೂಲ್‌ನ ಇಬ್ಬರು ಬಾಲಕಿಯರನ್ನು ಕರೆದು ಬೆತ್ತಲಾದರೆ ಅಥವಾ ನಗ್ನ ಪೋಟೋಗಳನ್ನು ತೋರಿಸಿದರೆ ೧೦ ಸಾವಿರ ರು.ಗಳನ್ನು ನೀಡುವುದಾಗಿ ಪುಸಲಾಯಿಸಿದ್ದ. ಅವರಲ್ಲಿ ಒಬ್ಬಳಿಗೆ ತನ್ನೊಂದಿಗೆ ಸೆಕ್ಸ್ ಮಾಡಲು ಒಪ್ಪಿದರೆ ಐಫೋನ್ ನೀಡುವುದಾಗಿ ಆಮಿಷ ವೊಡ್ಡಿದ್ದ. ಆದರೆ, ಆಕೆ ಐಫೋನ್ ಆಸೆಗೆ ಶಿಕ್ಷಕನ ಜೊತೆ ಸೆಕ್ಸ್ ಮಾಡಲು  ನಿರಾಕರಿದ್ದಾಳೆ. ಈ ಸುದ್ದಿ ತಿಳಿಯುತ್ತಿದ್ದಂತೆ ಕಾಮುಕ
ಶಿಕ್ಷಕನನ್ನು ಹೈಸ್ಕೂಲ್‌ನಿಂದ ಅಮಾನತು ಮಾಡಲಾಗಿದೆ.

loader