ಲೋನ್ ಕೌಂಟರ್‌ನ ಕೆಳಗೆ ಪತಿಯನ್ನು ಮಡಿಲಲ್ಲಿ ಮಲಗಿಸಿಕೊಂಡು ಪತ್ನಿ ಕಣ್ಣೀರು ಹಾಕುತ್ತಿದ್ದರೂ, ಬ್ಯಾಂಕ್ ಸಿಬ್ಬಂದಿಯೂ ಕುಳಿತಲ್ಲಿಂದ ಅಲುಗಾಡಿಲ್ಲ.

ಚೆನ್ನೈ(ಡಿ.04): ಬ್ಯಾಂಕಿನಿಂದ ಹಣ ವಿತ್‌ಡ್ರಾ ಮಾಡಲೆಂದು ಕ್ಯೂನಲ್ಲಿ ನಿಂತಿದ್ದ 70 ವರ್ಷದ ರೈತರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಝ್‌ಕಾಯ್ ಗ್ರಾಮದ ಸುಬ್ರಮಣಿಯನ್, ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಹಣಕ್ಕಾಗಿ ಸಾಲಿನಲ್ಲಿ ನಿಂತಿದ್ದಾಗ, ಒಮ್ಮೆಗೇ ಕುಸಿದುಬಿದ್ದರು. ಗಾಬರಿಗೊಂಡ ಅವರ ಪತ್ನಿ ಸಹಾಯಕ್ಕಾಗಿ ಯಾಚಿಸಿದರೂ ಯಾರೂ ನೆರವಾಗಿಲ್ಲ. ಸಹಾಯಕ್ಕೆ ಬಂದರೆ ಕ್ಯೂ ತಪ್ಪುತ್ತದೆ ಎಂಬ ಭೀತಿಯಿಂದ ಎಲ್ಲರೂ ಅಮಾನವೀಯವಾಗಿ ವರ್ತಿಸಿದ್ದಾರೆ.

ಲೋನ್ ಕೌಂಟರ್‌ನ ಕೆಳಗೆ ಪತಿಯನ್ನು ಮಡಿಲಲ್ಲಿ ಮಲಗಿಸಿಕೊಂಡು ಪತ್ನಿ ಕಣ್ಣೀರು ಹಾಕುತ್ತಿದ್ದರೂ, ಬ್ಯಾಂಕ್ ಸಿಬ್ಬಂದಿಯೂ ಕುಳಿತಲ್ಲಿಂದ ಅಲುಗಾಡಿಲ್ಲ. ಕೊನೆಗೆ ಆ್ಯಂಬುಲೆನ್ಸ್ ಬಂದಾಗ ಸುಬ್ರಮಣಿಯನ್ ಅವರು ಕೊನೆಯುಸಿರೆಳೆದಿದ್ದರು.