2019ರ ಲೋಕಸಭೆ ಚುನಾವಣೆಗೆ ಇನ್ನೇನು ಒಂದೂವರೆ ವರ್ಷ ಉಳಿದಿದೆ. ಆದರೆ ಪಕ್ಷದ ನಿರೀಕ್ಷೆಗೆ ಅನುಗುಣವಾಗಿ ಸಂಸದರು ಕೆಲಸ ಮಾಡದೇ ಹೋದ ಕಾರಣ ಬಿಜೆಪಿ ಹೈಕಮಾಂಡ್ ಅಸಮಾಧಾನಗೊಂಡಿದೆ ಎಂಬ ಮಾಹಿತಿ ಲಭಿಸಿದೆ. ಹೀಗಾಗಿ ಇಂಥ ಸಂಸದರಿಗೆ ವರಿಷ್ಠರು ಕಠಿಣ ಎಚ್ಚರಿಕೆ ನೀಡುವ ಸಾಧ್ಯತೆ ಇದೆ. ಅಲ್ಲದೆ, ಕಳಪೆ ಸಾಧನೆಯ ಕಾರಣ ಶೇ.70ರಷ್ಟು ಹಾಲಿ ಲೋಕಸಭಾ ಸದಸ್ಯರಿಗೆ ಟಿಕೆಟ್ ದೊರಕುವ ಸಾಧ್ಯತೆ ಇಲ್ಲ ಎಂದು ತಿಳಿದುಬಂದಿದೆ.

ನವದೆಹಲಿ(ಅ.02): 2019ರ ಲೋಕಸಭೆ ಚುನಾವಣೆಗೆ ಇನ್ನೇನು ಒಂದೂವರೆ ವರ್ಷ ಉಳಿದಿದೆ. ಆದರೆ ಪಕ್ಷದ ನಿರೀಕ್ಷೆಗೆ ಅನುಗುಣವಾಗಿ ಸಂಸದರು ಕೆಲಸ ಮಾಡದೇ ಹೋದ ಕಾರಣ ಬಿಜೆಪಿ ಹೈಕಮಾಂಡ್ ಅಸಮಾಧಾನಗೊಂಡಿದೆ ಎಂಬ ಮಾಹಿತಿ ಲಭಿಸಿದೆ. ಹೀಗಾಗಿ ಇಂಥ ಸಂಸದರಿಗೆ ವರಿಷ್ಠರು ಕಠಿಣ ಎಚ್ಚರಿಕೆ ನೀಡುವ ಸಾಧ್ಯತೆ ಇದೆ. ಅಲ್ಲದೆ, ಕಳಪೆ ಸಾಧನೆಯ ಕಾರಣ ಶೇ.70ರಷ್ಟು ಹಾಲಿ ಲೋಕಸಭಾ ಸದಸ್ಯರಿಗೆ ಟಿಕೆಟ್ ದೊರಕುವ ಸಾಧ್ಯತೆ ಇಲ್ಲ ಎಂದು ತಿಳಿದುಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಗಸ್ಟ್ ೧೫ರಂದು ಆಯಾ ಸಂಸದರು ತಮ್ಮ ಕ್ಷೇತ್ರದಲ್ಲಿ ಕೈಗೊಂಡ ತಿರಂಗಾ ಯಾತ್ರೆಯ ವೇಳೆ ದೊರೆತ ಜನಸ್ಪಂದನೆ ನೀರಸವಾಗಿತ್ತು. ಇದನ್ನು ಪಕ್ಷದ ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಪಕ್ಷದ ಹಿರಿಯರೊಬ್ಬರು ಹೇಳಿರುವುದಾಗಿ ಆಂಗ್ಲ ದಿನಪತ್ರಿಕೆ ದ ನ್ಯೂ ಇಂಡಿಯನ್ ಎಕ್ಸ್‌'ಪ್ರೆಸ್ ವರದಿ ಮಾಡಿದೆ.

ಡಿಜಿಟಲ್ ಪೇಮೆಂಟ್‌ಗೆ ಆದ್ಯತೆ ನೀಡುವ ಭೀಮ್ ಆ್ಯಪ್ ಅನ್ನು ಹೆಚ್ಚು ಜನರು ಡೌನ್‌ಲೋಡ್ ಮಾಡಿಕೊಳ್ಳುವಂತಾಗಬೇಕು ಎಂಬ ಗುರಿಯನ್ನು ಸಂಸದರಿಗೆ ನೀಡಲಾಗಿತ್ತು. ಆದರೆ ಈ ಗುರಿ ತಲುಪುವಲ್ಲಿ ಬಹುತೇಕ ಸಂಸದರು ವಿಲರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಪ್ರಧಾನಿಯವರ ಸಾಧನೆಯ ಬಗ್ಗೆ ಜನರಲ್ಲಿ ತೃಪ್ತಿ ಇದೆ ಎಂದೂ ಅವರು ಹೇಳಿದ್ದಾರೆ.