ಗುರುವಾರ 7 ವರ್ಷದ ಕ್ಯಾನ್ಸರ್ ರೋಗಿಯಾಗಿದ್ದ  ಬಾಲಕ ಕೊನೆಗೆ ಆತನ ಆಸೆಯನ್ನು ಈಡೇರಿಸಿಕೊಂಡಿದ್ದಾನೆ. 

ಮುಂಬೈ : ಗುರುವಾರ 7 ವರ್ಷದ ಕ್ಯಾನ್ಸರ್ ರೋಗಿಯಾಗಿದ್ದ ಬಾಲಕ ಕೊನೆಗೆ ಆತನ ಆಸೆಯನ್ನು ಈಡೇರಿಸಿಕೊಂಡಿದ್ದಾನೆ. ಪೊಲೀಸರು ಈತನ ಆಸೆ ನೆರವೇರಿಸಿಕೊಳ್ಳಲು ನೆರವಾಗಿದ್ದಾರೆ. ಅರ್ಪಿತ್ ಮಂಡಲ್ ಎನ್ನುವ ಬಾಲಕ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಈತನಿಗೆ ಪೊಲೀಸ್ ಆಗಬೇಕು ಎನ್ನುವ ಬಯಕೆ ಇತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಈ ವೇಳೆ ಆತನನ್ನು ಪೊಲೀಸ್ ಠಾಣೆಗೆ ಕರೆತಂದು ಪೊಲೀಸ್ ಯುನಿಫಾರ್ಮ್ ಹಾಕುವ ಮೂಲಕ ಆತನನ್ನು ಪೊಲೀಸ್ ಒಂದು ಮಾಡಲಾಗಿದೆ. ಅಲ್ಲದೇ ಪೊಲೀಸ್ ಅಧಿಕಾರಿಗಳೇ ಆತನಿಗೆ ಸೆಲ್ಯೂಟ್ ಹೊಡೆದಿದ್ದಾರೆ.

ಈ ಬಗ್ಗೆ ಮುಂಬೈ ಪೊಲೀಸರು ಟ್ವೀಟ್ ಮಾಡಿದ್ದು, ನಮ್ಮಿಂದಾದ ಕರ್ತವ್ಯ ನೆರವೇರಿಸಿದ್ದೇವೆ ಎಂದು ಆತನ ಸ್ಫೂರ್ತಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Scroll to load tweet…