ಆನೇಕಲ್/ ವೆಲ್ಲೂರು[ಮಾ. 06]  ಕರ್ನಾಟಕ ನೋಂದಣಿ ಕಾರು ತಮಿಳುನಾಡಿನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಗುರಿಯಾಗಿದ್ದು ಏಳು ಜನರು ದಾರುಣ ಸಾವಿಗೀಡಾಗಿದ್ದಾರೆ.

ಕರ್ನಾಟಕ ನೋಂದಣಿ ಹೊಂದಿರುವ ಡಿಸೈರ್ ಕಾರು ಹಾಗೂ ಲಾರಿ ನಡುವೆ ಡಿಕ್ಕಿಯಾಗಿದೆ. ತಮಿಳುನಾಡಿನ ವೇಲೂರು ಜಿಲ್ಲೆ ಅಂಬುರು ಬಳಿ ಲಾರಿಗೆ ಹಿಂಬದಯಿಂದ ಕಾರು ಅಪ್ಪಳಿಸಿದೆ. ಕಾರಿನಲ್ಲಿದ್ದ  ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು ಮತ್ತು ಮೂವರು ಪುರುಷರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಸಿಇಟಿ ಬರೆಯಲು ತೆರಳುತ್ತಿದ್ದ ತಿಪಟೂರಿನ ವಿದ್ಯಾರ್ಥಿಗಳು ಅಪಘಾತಕ್ಕೆ ಬಲಿ

ಮೃತರನ್ನುಮಹಾರಾಷ್ಟ್ರ ಮೂಲದವರೆಂದು ಹೇಳಲಾಗುತ್ತಿದೆ. ವೇಲೂರು ಬಳಿಯಿರುವ ಗೋಲ್ಡನ್ ಟೆಂಪಲ್ ಗೆ ಹೋಗಿ ವಾಪಸ್ ಬರುವಾಗ ದುರಂತ ಸಂಭವಿಸಿದೆ.