ಬುಧವಾರ ರಾತ್ರಿ ಹರಿನಗರ ವಲಯದಲ್ಲಿ ಉಗ್ರರ ನುಸುಳುವಿಕೆಯನ್ನು ಬಿಎಸ್'ಎಫ್ ಯೋಧರು ವಿಫಲಗೊಳಿಸಿದ್ದರು.
ಕಾತ್ವಾ(ಅ.21): ಜಮ್ಮು ಮತ್ತು ಕಾಶ್ಮೀರದ ಅಂತರರಾಷ್ಟ್ರೀಯ ಗಡಿಯ ಕಾತ್ವಾ ಜಿಲ್ಲೆಯಲ್ಲಿ ಪಾಕಿಸ್ತಾನಿ ರೇಂಜರ್'ಗಳು ಹಾಗೂ ಉಗ್ರರು ನಡೆಸಿದ ದಾಳಿಗೆ ಭಾರತೀಯ ಸೇನೆ ನಡೆಸಿದ ಪ್ರತಿ ದಾಳಿಗೆ ಪಾಕ್'ನ 7 ರೇಂಜರ್'ಗಳು ಹಾಗೂ ಒಬ್ಬ ಉಗ್ರ ಹತನಾಗಿದ್ದಾನೆ.
ಬುಧವಾರ ರಾತ್ರಿ ಹರಿನಗರ ವಲಯದಲ್ಲಿ ಉಗ್ರರ ನುಸುಳುವಿಕೆಯನ್ನು ಬಿಎಸ್'ಎಫ್ ಯೋಧರು ವಿಫಲಗೊಳಿಸಿದ್ದರು. ಇದನ್ನೇ ಪ್ರತಿಯಾಗಿಟ್ಟುಕೊಂಡ ಪಾಕಿಸ್ತಾನಿ ರೇಂಜರ್'ಗಳು ಇಂದು ಅಂತರ ರಾಷ್ಟ್ರೀಯ ಗಡಿ ರೇಖೆಯ ಬಿಎಸ್'ಎಫ್ ಸೇನಾ ಪ್ರಾಬಲ್ಯದ ಪ್ರದೇಶದಲ್ಲಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಒರ್ವ ಬಿಎಸ್'ಎಫ್ ಜವಾನ ತೀರ್ವವಾಗಿ ಗಾಯಗೊಂಡಿದ್ದಾನೆ. ತದ ನಂತರ ಬಿಎಸ್ಎಫ್ ಯೋಧರು ಸಹ ದಾಳಿ ನಡೆಸಿ 7 ರೇಂಜರ್'ಗಳು ಹಾಗೂ ಒಬ್ಬ ಉಗ್ರರನ್ನು ಹತ್ಯೆ ಮಾಡಿದ್ದಾರೆ.
ಕಳೆದ ತಿಂಗಳು ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ದಾಳಿ ನಡೆಸಿದ ನಂತರ ಪಾಕ್ 30ಕ್ಕೂ ಹೆಚ್ಚು ಬಾರಿ ಕದನವಿರಾಮ ಉಲ್ಲಂಘಿಸಿದೆ.
