ರೈತರು, ಚಿಲ್ಲರೆ ಕ್ಷೇತ್ರದ ಸಣ್ಣ ವ್ಯಾಪಾರಸ್ಥರು, ಗುತ್ತಿಗೆ ಮತ್ತು ನಿರ್ಮಾಣ ಕ್ಷೇತ್ರದ ಕೆಲಸಗಾರರು ತೊಂದರೆಗೆ ಒಳಗಾಗುವವರು
ನವದೆಹಲಿ(ಅ.18): ಕಳೆದ ನಾಲ್ಕು ವರ್ಷಗಳಲ್ಲಿ ದಿನವೊಂದರಲ್ಲಿ 550 ಉದ್ಯೋಗಗಳು ನಷ್ಟವಾಗಿವೆ. ಇದೇ ರೀತಿ ವ್ಯವಸ್ಥೆ ಮುಂದುವರಿದರೆ 2050ರ ವೇಳೆಗೆ 7 ಮಿಲಿಯದಷ್ಟು ಉದ್ಯೋಗಗಳು ನಷ್ಟವಾಗಲಿವೆ ಎಂದು ಅಧ್ಯಯನವೊಂದು ಹೇಳಿಕೊಂಡಿದೆ. ಇದರಿಂದ ಅತ್ಯಂತ ಹೆಚ್ಚು ಕಷ್ಟಕ್ಕೆ ಒಳಗಾಗುವರೆಂದರೆ ರೈತರು, ಚಿಲ್ಲರೆ ಕ್ಷೇತ್ರದ ಸಣ್ಣ ವ್ಯಾಪಾರಸ್ಥರು, ಗುತ್ತಿಗೆ ಮತ್ತು ನಿರ್ಮಾಣ ಕ್ಷೇತ್ರದ ಕೆಲಸಗಾರರು ತೊಂದರೆಗೆ ಒಳಗಾಗುವವರು ಎಂದು ಅದು ಹೇಳಿಕೊಂಡಿದೆ. ಈ ವರ್ಷದ ಆರಂಭದಲ್ಲಿ ಕಾರ್ಮಿಕ ಇಲಾಖೆ ಬಿಡುಗಡೆ ಮಾಡಿದ್ದ ದಾಖಲೆಗಳ ಪ್ರಕಾರ 2015ರಲ್ಲಿ ಕೇವಲ 1.35 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. 2014ರಲ್ಲಿ ಅದರ ಪ್ರಮಾಣ 4.19 ಲಕ್ಷ, 2011ರಲ್ಲಿ 11 ಲಕ್ಷದಷ್ಟಾಗಿತ್ತು.
