ನವದೆಹಲಿ(ನ.30): ಪಾಕಿಸ್ತಾನದ ಪುಂಡಾಟಿಕೆಗೆ ಕೊನೆಯೇ ಇಲ್ಲದಂತಾಗಿದೆ. ಪದೇ ಪದೇ ಸೇನಾ ಶಿಬಿರದ ಮೇಲೆ ಅಪ್ರಚೋದಿತ ದಾಳಿ ನಡೆಸುತ್ತಿರುವ ಉಗ್ರರಿಗೆ ಭಾರತೀಯ ಯೋಧರು ತಕ್ಕ ಪಾಠ ಕಲಿಸಿದರು. ನರಿ ಬುದ್ದಿ ತೋರಿಸುತ್ತಿರುವ ಪಾಕ್ ಉಗ್ರರು, ನಿನ್ನೆ ಮತ್ತೆ ಜಮ್ಮು ಕಾಶ್ಮೀರದ ನಗ್ರೋಟಾದಲ್ಲಿ ತಮ್ಮ ಚಾಳಿ ಮುಂದುವರಿಸಿದ್ದರು. ಇದಕ್ಕೆ ನಮ್ಮವರು ತಕ್ಕ ಉತ್ತರವನ್ನೇ ನೀಡಿದ್ದಾರೆ.

ದೇಶ ರಕ್ಷಣೆಗೆ ಮತ್ತೆ ಪ್ರಾಣ ತ್ಯಾಗ ಮಾಡಿದ 7 ಸೈನಿಕರು: ಹುತಾತ್ಮರಾಗುವ ಮುನ್ನ ಉಗ್ರರ ಹೆಡೆಮುರಿ ಕಟ್ಟಿದ ವೀರರು

ಜಮ್ಮು ಕಾಶ್ಮಿರದ ನಗ್ರೋಟಾದ ಸೇನಾ ಶಿಬಿರದ ಮೇಲೆ  ನಿನ್ನೆ ನುಸುಕಿನಲ್ಲಿ ಉಗ್ರರು ನಡೆಸಿದ ಅಪ್ರಚೋದಿತ ಗುಂಡಿನ ದಾಳಿ, ಹಾಗೂ ಗ್ರೇನೆಡ್ ದಾಳಿಗೆ ಭಾರತೀಯ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. 6 ಉಗ್ರರನ್ನು ಸದೆ ಬಡಿಯುವಲ್ಲಿ  ನಮ್ಮ ಯೋಧರು ಯಶಸ್ವಿಯಾಗಿದ್ದಾರೆ. ಇನ್ನು ನಮ್ಮ ಇಬ್ಬರು ಅಧಿಕಾರಿಗಳು ಸೇರಿದಂತೆ 7 ಯೋಧರು ಹುತಾತ್ಮರಾಗಿದ್ದಾರೆ.

ವೀರ ಯೋಧರಿಗೆ ಸಲಾಂ

1. ಹೆಸರು : ಅಕ್ಷಯ್ ಗಿರೀಶ್ ಕುಮಾರ್, ಹುದ್ದೆ : ಮೇಜರ್, ಮೂಲ : ಬೆಂಗಳೂರು, ಕರ್ನಾಟಕ

2. ಹೆಸರು : ಗೋಸಾವಿ ಕುನಾಲ್ ಮನ್ನಾದೀರ್, ಹುದ್ದೆ : ಮೇಜರ್, ಮೂಲ : ಪಂದಾರ್ ಪುರ್ , ಮಹಾರಾಷ್ಟ್ರ

3. ಹೆಸರು : ಸುಕ್ರಾಜ್ ಸಿಂಗ್, ಹುದ್ದೆ : ಹವಲ್ದಾರ್, ಮೂಲ : ಮಾನ್ ನಗರ್ ಪಂಜಾಬ್

4. ಹೆಸರು : ಕದಮ್ ಸಂಭಾಜಿ ಯಶ್ವಂತ್ ರಾವ್, ಹುದ್ದೆ : ಲ್ಯಾನ್ಸ್ ನಾಯ್ಕ್, ಮೂಲ : ಜಾನಾಪುರಿ, ಮಹಾರಾಷ್ಟ್ರ

5. ಹೆಸರು : ರಾಘವೇಂದ್ರ ಸಿಂಗ್, ಹುದ್ದೆ : ಗ್ರೆನೇಡಿಯರ್, ಮೂಲ : ಗಡಿಚಾತರ್, ರಾಜಸ್ಥಾನ

6. ಹೆಸರು : ಅಸೀಮ್ ರಾಯ್, ಹುದ್ದೆ : ರೈಫಲ್ ಮನ್, ಮೂಲ : ರಟ್ಟಾಂಚ

7. ಹೆಸರು : ಪಿಓ ಕೋತಾಂಗ್, ಹುದ್ದೆ : ರೈಫಲ್ ಮನ್, ಮೂಲ : ನೇಪಾಳ

ಪಾಪಿ ಉಗ್ರರ ಅಪ್ರಚೋದಿತ ದಾಳಿಯಲ್ಲಿ  ಹೆಚ್ಚಿನ ಅನಾಹುತಗಳಿಗೆ ಅವಕಾಶ ನೀಡದ ಯೋಧರು, 12 ಸೈನಿಕರು, ಇಬ್ಬರು ಮಹಿಳೆಯರು ಹಾಗೂ 2 ಇಬ್ಬರು ಮಕ್ಕಳು ಸೇರಿದಂತೆ 17 ಮಂದಿಯನ್ನು ರಕ್ಷಿಸಿದ್ದಾರೆ. ಅಲ್ಲದೆ ಇಂತಹ ಘಟನೆಗಳಲ್ಲಿ ಪ್ರಾಣ ಹೋಗುವುದು ನಿಶ್ಚಯವಾಗಿದ್ರೂ, ಯಾವುದನ್ನು ಲೆಕ್ಕಿಸದೆ ತಮ್ಮ ಪ್ರಾಣವನ್ನು ಪಣಕಿಟ್ಟು ನಮ್ಮ ಯೋಧರು ದೇಶವನ್ನು ರಕ್ಷಿಸುತ್ತಲೆ ಇದ್ದಾರೆ. ಸದ್ಯ ಕಳೆದ ಕೆಲವು ದಿನಗಳಿಂದ ಇಂತಹ ಘಟನೆಗಳು ಗಡಿಯಲ್ಲಿ ಸಾಮಾನ್ಯವಾಗಿದ್ರು ಕೊಂಚವೂ ಎದೆಗುಂದದೆ ದೇಶ ರಕ್ಷಣೆಗೆ ಸದಾ ಸನ್ನದರಾಗಿರುವ ಭಾರತೀಯ ಯೋಧರಿಗೆ ಸಲಾಮ್ ಹೇಳಲೇಬೇಕು.