ತಾಲಿಬಾನಿಗಳಿಂದ ಅಫ್ಘಾನ್'ನಲ್ಲಿ 7 ಭಾರತೀಯರ ಅಪಹರಣ

7 Indian engineers abducted in Afghanistan   by Taliban gunmen
Highlights

ಸರ್ಕಾರಿ ನೌಕಕರೆಂದು ತಪ್ಪಾಗಿ ತಿಳಿದು ಅಫ್ಘಾನ್'ನ ಉತ್ತರ ಪ್ರಾಂತ್ಯದ ಬಾಗ್ಲಾನ್'ನಲ್ಲಿ ಅಪಹರಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.  

ಕಾಬೂಲ್(ಮೇ.06): ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 7 ಭಾರತೀಯ ಇಂಜಿನಿಯರ್'ಗಳನ್ನು ಬಂದೂಕುಧಾರಿ ತಾಲಿಬಾನಿಗಳು ಅಪಹರಿಸಿದ್ದಾರೆ.
ಸರ್ಕಾರಿ ನೌಕಕರೆಂದು ತಪ್ಪಾಗಿ ತಿಳಿದು ಅಫ್ಘಾನ್'ನ ಉತ್ತರ ಪ್ರಾಂತ್ಯದ ಬಾಗ್ಲಾನ್'ನಲ್ಲಿ ಅಪಹರಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಪಹೃತರು  ಎಲೆಕ್ಟ್ರಿಕಲ್  ಇಂಜಿನಿಯರ್ಗಳಾಗಿದ್ದು ತಮ್ಮ
ಸಂಸ್ಥೆಯಿಂದ ಬೇರೆಡೆ ಸಂಚರಿಸುತ್ತಿದ್ಧಾಗ ಕಿಡ್ನ್ಯಾಪ್ ಮಾಡಲಾಗಿದೆ. ಭಾರತೀಯ ವಿದೇಶಾಂಗ ಇಲಾಖೆ ಅಪಹೃತರ ಬಿಡುಗಡೆಗೆ ಅಫ್ಘಾನ್ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ.

loader