ಏಳು ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು(ಸೆ.29): ರಾಜ್ಯ ಸರ್ಕಾರ ಗುರುವಾರ 7 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವರ್ಗಾವಣೆಯಾದವರ ವಿವರ ಹೀಗಿದೆ.
ಡಾ.ಪಿ.ಸಿ.ಜಾಫರ್-ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ,
ಅನ್ಬುಕುಮಾರ್ ವಿ.- ರಾಜೀವ್ ಗಾಂಧಿ ವಸತಿ ನಿಗಮ ವ್ಯವಸ್ಥಾಪಕ ನಿರ್ದೇಶಕ,
ಡಾ.ಎನ್.ವಿ.ಪ್ರಸಾದ್- ಹಿಂದುಳಿದ ವರ್ಗಗಳ ಇಲಾಖೆ ಆಯುಕ್ತ,
ಎ.ಬಿ.ಇಬ್ರಾಹಿಂ- ಕೆಯುಐಡಿಎಫ್‌ಸಿ ವ್ಯವಸ್ಥಾಪಕ ನಿರ್ದೇಶಕ,
ಡಾ.ಎಂ.ಟಿ. ರಾಜು- ಸರ್ವ ಶಿಕ್ಷಣ ಅಭಿಯಾನ,
ಶಿವಮೂರ್ತಿ ಜಿ.ಎನ್. - ರಾಜ್ಯ ಗೃಹ ಮಂಡಳಿ ಆಯುಕ್ತ,
ಮನೀಶ್ ಮೌದ್ಗಿಲ್- ಭೂ ದಾಖಲೆ ಮತ್ತು ಸರ್ವೆ ಇಲಾಖೆ ಆಯುಕ್ತ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ
