329 ರಾಜ್ಯ ವಿವಿಗಳ ಹಾಗೂ 12,912 ಕಾಲೇಜುಗಳ 7.58 ಲಕ್ಷ ಸಹಾಯಕ ಹಾಗೂ ಸಹ ಪ್ರಾಧ್ಯಾಪಕರು ಜನವರಿ 1, 2016ರ ಅನ್ವಯ ಕೇಂದ್ರ ಸರ್ಕಾರದ 7ನೇ ವೇತನ ಆಯೋಗದಡಿ ಅನುಕೂಲ ಪಡೆಯಲಿದ್ದಾರೆ.  

ನವದೆಹಲಿ(ಅ.11): ಕೇಂದ್ರ ಸರ್ಕಾರವು 7ನೇ ವೇತನ ಆಯೋಗವನ್ನು ಕೇಂದ್ರ, ರಾಜ್ಯ ವಿವಿಗಳು ಹಾಗೂ ಅನುದಾನಿತ ಕಾಲೇಜುಗಳ ಶಿಕ್ಷಕರಿಗೂ ವಿಸ್ತರಿಸಿದ್ದು ಅವರೆಲ್ಲ ಈ ಬಾರಿ ದೀಪಾವಳಿ ಬಂಪರ್ ಪಡೆಯಲಿದ್ದಾರೆ.

329 ರಾಜ್ಯ ವಿವಿಗಳ ಹಾಗೂ 12,912 ಕಾಲೇಜುಗಳ 7.58 ಲಕ್ಷ ಸಹಾಯಕ ಹಾಗೂ ಸಹ ಪ್ರಾಧ್ಯಾಪಕರು ಜನವರಿ 1, 2016ರ ಅನ್ವಯ ಕೇಂದ್ರ ಸರ್ಕಾರದ 7ನೇ ವೇತನ ಆಯೋಗದಡಿ ಅನುಕೂಲ ಪಡೆಯಲಿದ್ದಾರೆ. ಕೇಂದ್ರ ಸರ್ಕಾರದಿಂದ ಅನುದಾನ ಪಡೆಯುವ ಎಲ್ಲ ಡೀಮ್ಡ್ ವಿವಿಗಳು ಹಾಗೂ 43 ಕೇಂದ್ರೀಯ ವಿವಿಗಳ ಶಿಕ್ಷಕರು ಅನುಕೂಲ ಪಡೆಯಲಿದ್ದಾರೆ. ಅಲ್ಲದೆ ಇವರೆಲ್ಲರ ವೇತನ ಶೇ.22ರಿಂದ 28ರವರೆಗೆ ಏರಿಕೆಯಾಗಲಿದೆ' ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವೇಡ್ಕರ್ ತಿಳಿಸಿದ್ದಾರೆ.