ಕಳೆದ 3 ವರ್ಷಗಳಲ್ಲಿ ಪ್ರಧಾನ ಮಂತ್ರಿ ಜನ ಧನ ಯೋಜನೆಯಲ್ಲಿ ಸುಮಾರು 30 ಕೋಟಿ ಕುಟುಂಬಗಳು ಒಳಗೊಂಡಿವೆ ಹಾಗೂ ಅವರ ಖಾತೆಗಳಲ್ಲಿ ರೂ. 65, 000 ಕೋಟಿ ಹಣ ಜಮೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನವದೆಹಲಿ: ಕಳೆದ 3 ವರ್ಷಗಳಲ್ಲಿ ಪ್ರಧಾನ ಮಂತ್ರಿ ಜನ ಧನ ಯೋಜನೆಯಲ್ಲಿ ಸುಮಾರು 30 ಕೋಟಿ ಕುಟುಂಬಗಳು ಒಳಗೊಂಡಿವೆ ಹಾಗೂ ಅವರ ಖಾತೆಗಳಲ್ಲಿ ರೂ. 65, 000 ಕೋಟಿ ಹಣ ಜಮೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇಂದು 35ನೇ 'ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 28 ಆಗಸ್ಟ್'ಕ್ಕೆ ಜನ-ಧನ ಯೋಜನೆ ಜಾತಿಯಾಗಿ 3 ವರ್ಷಗಳು ಸಂಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ.

ಈ ಮೂರು ವರ್ಷಗಳಲ್ಲಿ ನಾವು 30 ಕೋಟಿ ಕುಟುಂಬಗಳನ್ನು ಸೆರ್ಪಡೆಗೊಳಿಸಿದ್ದೇವೆ. ಈ ಸಂಖ್ಯೆಯು ಬಹಳಷ್ಟು ದೇಶಗಳ ಜನಸಂಖ್ಯೆಯಿಂದ ಹೆಚ್ಚು, ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಈ ಯೋಜನೆಯ ಮೂಲಕ ಬಡವರು ಕೂಡಾ ರಾಷ್ಟ್ರದ ಆರ್ಥಿಕ ಮುಖ್ಯವಾಹಿನಿಯಲ್ಲಿ ಸೇರಿದ್ದಾರೆ. ಈ ಮೂಲಕ ಅವರು ಹಣ ಉಳಿತಾಯ ಮಾಡುತ್ತಿದ್ದಾರೆ, ಹಾಗೂ ಸುರಕ್ಷಿತ ಭಾವನೆಯನ್ನು ಅನುಭವಿಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.