ಡೆಹ್ರಾಡೂನ್‌[ಸೆ.27]: ಡೆಂಘೀ ಜ್ವರ ಬಂದರೆ ತೀರಾ ಕಾಳಜಿ ವಹಿಸಬೇಕು, ಸೂಕ್ತ ವೈದ್ಯರನ್ನು ಸಂಪರ್ಕಿಸಬೇಕು, ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂಬುದು ಸಾಮಾನ್ಯ ಜನರ ತಿಳುವಳಿಕೆ.

787878202ಕ್ಕೆ ಕರೆ ಮಾಡಿ, ಡೆಂಗ್ಯೂ ವಿರುದ್ಧ ಹೋರಾಡಿ

ಆದರೆ ಅದೇನೂ ಮಾಡುವುದು ಬೇಡ. 650 ಮಿಲಿಗ್ರಾಂನ ಪ್ಯಾರಾಸಿಟಮಲ್‌ ಮಾತ್ರೆ ನುಂಗಿ ಒಂದಿಷ್ಟುವಿಶ್ರಾಂತಿ ಪಡೆದರೆ, ಆ ಜ್ವರ ಗುಣಮುಖವಾಗುತ್ತದೆ ಎಂದು ಉತ್ತರಾಖಂಡ ಬಿಜೆಪಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಹೇಳಿದ್ದಾರೆ.

ಸೊಳ್ಳೆಯಿಂದ ಕಾಡೋ ಡೆಂಗ್ಯೂ: ಸತ್ಯ, ಮಿಥ್ಯಗಳೇನು?

ಉತ್ತರಾಖಂಡದಲ್ಲಿ 4800 ಮಂದಿ ಡೆಂಘೀ ಪೀಡಿತರಾಗಿರುವಾಗಲೇ ಅವರಿಂದ ಈ ಸಲಹೆ ಹೊರಬಿದ್ದಿದೆ. ‘ಗಾಬರಿಯಾಗಬೇಕಾಗಿಲ್ಲ. ಯಾರಿಗಾದರೂ ಡೆಂಘೀ ಜ್ವರ ಬಂದಿದ್ದರೆ, 500 ಎಂಜಿ ಪ್ಯಾರಾಸಿಟಮಲ್‌ ಮಾತ್ರೆ ಬದಲಾಗಿ 650 ಎಂಜಿಯ ಪ್ಯಾರಾಸಿಟಮಲ್‌ ನುಂಗಿ’ ಎಂದು ಅವರು ಸಲಹೆ ಮಾಡಿದ್ದಾರೆ.