65 ನೇ ಫಿಲ್ಮ್ ಫೇರ್ ; ಶೃತಿ ಹರಿಹರನ್’ಗೆ ಅತ್ಯುತ್ತಮ ನಟಿ ಪ್ರಶಸ್ತಿ

First Published 17, Jun 2018, 8:04 PM IST
65 th Filmfare award announced; Shruthi Hariharan bagged best actress award
Highlights

 65 ನೇ ಫಿಲ್ಮ್ ಫೇರ್ ಪ್ರಶಸ್ತಿ ಪ್ರಕಟಗೊಂಡಿದೆ.  ಬ್ಯೂಟಿಫುಲ್ ಮನಸುಗಳು ಚಿತ್ರಕ್ಕೆ ಶೃತಿ ಹರಿಹರನ್ ಅತ್ಯುತ್ತಮ ನಾಯಕಿ ಪ್ರಶಸ್ತಿ ಪಡೆದಿದ್ದಾರೆ.  

ಬೆಂಗಳೂರು (ಜೂ. 17): ದಕ್ಷಿಣ ಭಾರತ ಚಿತ್ರರಂಗದ 2018ನೇ ಸಾಲಿನ 65 ನೇ ಸಾಲಿನ ಸೌತ್ ಫಿಲಂ ಫೇರ್ ಪ್ರಶಸ್ತಿ  ಪ್ರಕಟಗೊಂಡಿದೆ.  

ಬ್ಯೂಟಿಫುಲ್ ಮನಸುಗಳು ಚಿತ್ರಕ್ಕೆ ಶೃತಿ ಹರಿಹರನ್ ಅತ್ಯುತ್ತಮ ನಾಯಕಿ ಪ್ರಶಸ್ತಿ ಪಡೆದಿದ್ದಾರೆ. ಅಲ್ಲಮ ಚಿತ್ರಕ್ಕೆ ಧನಂಜಯ್ ಅತ್ಯತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.  ಚೌಕ ಚಿತ್ರಕ್ಕೆ ತರುಣ್ ಸುಧೀರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ.   ಚೌಕ ಚಿತ್ರದ ಅಪ್ಪ ಐ ಲವ್ ಯು  ಹಾಡಿಗೆ ವಿ ನಾಗೇಂದ್ರ ಪ್ರಸಾದ್ ಅತ್ಯುತ್ತಮ ಗೀತೆ ರಚನೆಕಾರ ಪ್ರಶಸ್ತಿ ಪಡೆದಿದ್ದಾರೆ.  ಇದೇ ಹಾಡಿಗೆ ಅನುರಾಧ ಭಟ್ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಪಡೆದಿದ್ದಾರೆ.  

loader