64 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬುಧವಾರ ದಿಲ್ಲಿಯಲ್ಲಿ ಪ್ರದಾನ ಮಾಡಿದರು. ಕನ್ನಡಕ್ಕೆ 6 ಪ್ರಶಸ್ತಿಗಳು ಈ ಬಾರಿ ಸಂದವು.
ಬೆಂಗಳೂರು (ಮೇ.03): 64 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬುಧವಾರ ದಿಲ್ಲಿಯಲ್ಲಿ ಪ್ರದಾನ ಮಾಡಿದರು. ಕನ್ನಡಕ್ಕೆ 6 ಪ್ರಶಸ್ತಿಗಳು ಈ ಬಾರಿ ಸಂದವು.
ಸಂಗೀತ ನಿರ್ದೇಶನ, ಹಿನ್ನೆಲೆ ಸಂಗೀತ, ಮೇಕಪ್‌ಗಾಗಿ ‘ಅಲ್ಲಮ’ಕ್ಕೆ ಪ್ರಶಸ್ತಿ ಸಂದಿದ್ದು ಸಂಗೀತ ನಿರ್ದೇಶಕ ಬಾಪು ಪದ್ಮನಾಭ ಅವರು ಪ್ರಶಸ್ತಿ ಸ್ವೀಕರಿಸಿದರು. ಅತ್ಯುತ್ತಮ ಪ್ರಾದೇಶಿಕ ಚಿತ್ರ ಎನ್ನಿಸಿಕೊಂಡ ‘ರಿಸರ್ವೇಷನ್’ ಚಿತ್ರದ ನಿರ್ದೇಶಕ ನಿಖಿಲ್ ಮಂಜು, ಅತ್ಯುತ್ತಮ ತುಳು ಪ್ರಾದೇಶಿಕ ಚಿತ್ರ ‘ಮದಿಪು’ ನಿರ್ಮಾಪಕ ಸಂದೀಪ್‌ಕುಮಾರ್ ನಂದಳಿಕೆ ಗೌರವ ಸ್ವೀಕಾರ ಮಾಡಿದರು. ಇನ್ನು ‘ರೈಲ್ವೆ ಚಿಲ್ಡ್ರನ್’ ಕನ್ನಡ ಚಿತ್ರಕ್ಕಾಗಿ ಮನೋಹರ ಅತ್ಯುತ್ತಮ ಬಾಲನಟ ಪ್ರಶಸ್ತಿ ಸ್ವೀಕರಿಸಿದರು.
