Asianet Suvarna News Asianet Suvarna News

2017ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಈ ಬಾರಿ 62 ಮಂದಿ ಆಯ್ಕೆ

ನಟ ಮು.ಮಂ. ಚಂದ್ರು, ಸಾಹಿತಿ ವೈದೇಹಿ, ಇತಿಹಾಸಕಾರ ರಾಮಚಂದ್ರ ಗುಹ ಅವರು ಪಟ್ಟಿಯಲ್ಲಿದ್ದಾರೆ. ನವೆಂಬರ್ 01 ರಂದು ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿಗಳು ಸಾಧಕರಿಕೆ ಪ್ರಶಸ್ತಿ ವಿತರಿಸಲಿದ್ದಾರೆ. ಪ್ರಶಸ್ತಿಯು 1 ಲಕ್ಷ ರೂ. ನಗದು, 20 ಗ್ರಾಂ ಬಂಗಾರ ಹಾಗೂ ಫಲಕ ಒಳಗೊಂಡಿರುತ್ತದೆ.

62 Achievers Kannada Rajyotsava awardees 2017

ಬೆಂಗಳೂರು(ಅ.30): ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 62 ಮಂದಿ ಸಾಧಕರಿಗೆ 2017ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನಟ ಮು.ಮಂ. ಚಂದ್ರು, ಸಾಹಿತಿ ವೈದೇಹಿ, ಇತಿಹಾಸಕಾರ ರಾಮಚಂದ್ರ ಗುಹ ಅವರು ಪಟ್ಟಿಯಲ್ಲಿದ್ದಾರೆ. ನವೆಂಬರ್ 01 ರಂದು ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿಗಳು ಸಾಧಕರಿಕೆ ಪ್ರಶಸ್ತಿ ವಿತರಿಸಲಿದ್ದಾರೆ. ಪ್ರಶಸ್ತಿಯು 1 ಲಕ್ಷ ರೂ. ನಗದು, 20 ಗ್ರಾಂ ಬಂಗಾರ ಹಾಗೂ ಫಲಕ ಒಳಗೊಂಡಿರುತ್ತದೆ.

 

ಪ್ರಶಸ್ತಿಗೆ ಆಯ್ಕೆಯಾಗಿರುವವರ ಸಂಪೂರ್ಣ ಪಟ್ಟಿ

ನ್ಯಾಯಾಂಗ :

ನ್ಯಾ.ಎಚ್​.ಎನ್​.ನಾಗಮೋಹನದಾಸ್

​ಸಾಹಿತ್ಯ :

 ಡಾ.ಬಸವರಾಜ ಸಬರದ, ವೈದೇಹಿ, ಮಾಹೆರ್ ಮನ್ಸೂರ್​, ಹನುಮಾಕ್ಷಿ ಗೋಗಿ, ಡಿ.ಎಸ್​.ನಾಗಭೂಷಣ

ರಂಗಭೂಮಿ

ಬೇಲೂರು ಕೃಷ್ಣಮೂರ್ತಿ(ನಾಟಕಕಾರ), ಗೂಡೂರು ಮಮತಾ( ವೃತ್ತಿ ರಂಗಭೂಮಿ),

ಸಿ.ಕೆ.ಗುಂಡಣ್ಣ (ಹವ್ಯಾಸಿ ರಂಗಭೂಮಿ), ಶಿವಪ್ಪ ಭರಮಪ್ಪ ಅದಗುಂಚಿ, .ವರಲಕ್ಷ್ಮಿ (ಗ್ರಾಮೀಣ ರಂಗಭೂಮಿ), ಎನ್​.ವೈ.ಪುಟ್ಟಣ್ಣಯ್ಯ (ಪೌರಾಣಿಕ)

ಸಿನಿಮಾ, ಕಿರುತೆರೆ

ಕೆ.ಜೆ.ಯೇಸುದಾಸ್​​( ಹಿನ್ನೆಲೆ ಗಾಯನ), ಕಾಂಚನ (ನಟನೆ), ಮುಖ್ಯಮಂತ್ರಿ ಚಂದ್ರು(ಸಿನಿಮಾ), ಹಾಸನ ರಘು( ಸಾಹಸ ಸಂಯೋಜನೆ)

ಸಂಗೀತ, ನೃತ್ಯ

ವಿಧೂಷಿ ಲಲಿತ.ಜೆ ರಾವ್​( ಹಿಂದೂಸ್ತಾನಿ ಸಂಗೀತ), ರಾಜಪ್ರಭು ಧೋತ್ರೆ(ಅಭಂಗ ಗಾಯನ), ರಾಜೇಂದ್ರ ಸಿಂಗ್ಪವಾರ್​( ಹಾರ್ಮೋನಿಯಂ), ವೀರೇಶ ಕಿತ್ತೂರ (ಸುಗಮ ಸಂಗೀತ), ಉಳ್ಳಾಲ ಮೋಹನ್ಕುಮಾರ್(ನೃತ್ಯ)

ಜಾನಪದ

ತಂಬೂರು ಜವರಯ್ಯ (ತತ್ವಪದ), ಶಾವಮ್ಮ( ಲಂಬಾಣಿ ನೃತ್ಯ), ಗೊರವರ ಮೈಲಾರಪ್ಪ (ಗೊರವರ ಕುಣಿತ), ತಾಯಮ್ಮ (ಸೋಬಾನೆ ಪದ), ಮಾನಪ್ಪ ಈರಪ್ಪಲೋಹಾರ (ಪುರವಂತಿಕೆ), ಕೃಷ್ಣಪ್ಪ ಗೋವಿಂದಪ್ಪ ಪುರವರ(ಡೊಳ್ಳಿನ ಪದ), ಡೆಂಗಮ್ಮ ಕರಡಿಗುಡ್ಡ (ಜಾನಪದ ಗಾಯನ)

ಯಕ್ಷಗಾನ-ಬಯಲಾಟ

ಶಿವರಾಮ ಜೋಗಿ(ತೆಂಕುತಿಟ್ಟು), ಬಳ್ಳೂರು ಕೃಷ್ಣಯಾಜಿ(ಬಡಗುತಿಟ್ಟು),ಕೆ. ಪಂಪಾಪತಿ(ಸಾರಥಿ, ಬಯಲಾಟ), ಈಶ್ವರವ್ವ ಹುಚ್ಚವ್ವ ಮಾದರ(ಬಯಲಾಟ)

ಸಂಕೀರ್ಣ :

ರಾಮಚಂದ್ರ ಗುಹಾ (ಇತಿಹಾಸಕಾರ-ಚಿಂತಕ), ಎಸ್. ಸಯ್ಯದ್ ಅಹಮದ್ (ಪರ್ಷಿಯನ್ ಭಾಷಾ ತಜ್ಞ), ಎಚ್.ಬಿ. ಮಂಜುನಾಥ್ (ವ್ಯಂಗ್ಯಚಿತ್ರ), ಡಾ.ಪಿ.ಕೆ. ರಾಜಶೇಖರ್(ಜಾನಪದ ತಜ್ಞ), ಪ್ರೊ.ಬಿ. ಗಂಗಾಧರ ಮೂರ್ತಿ (ಕಲೆ -ಶಿಕ್ಷಣ)

ಚಿತ್ರಕಲೆ-ಶಿಲ್ಪಕಲೆ:

ಜಿ.ಎಲ್.ಎನ್.ಸಿಂಹ(ಚಿತ್ರಕಲೆ), ಶಾಣಮ್ಮ ಮ್ಯಾಗೇರಿ(ಕೌದಿಕಲೆ), ಹೊನ್ನಪ್ಪ'ಚಾರ್ಯ(ಶಿಲ್ಪಕಲೆ), ಮನೋಹರ ಕೆ. ಪತ್ತಾರ(ಚಿತ್ರಶಿಲ್ಪ)

ಕೃಷಿ-ಪರಿಸರ:

ಡಾ. ಬಿಸಲಯ್ಯ, ಅಬ್ದುಲ್ ಖಾದರ್ ಇಮಾಮ್ ಸಾಬ, ಎಸ್.ಎಂ. ಕೃಷ್ಣಪ್ಪ, ಸಿ. ಯತಿರಾಜು

ಮಾಧ್ಯಮ:

ಕುಸುಮಾ ಶಾನುಭಾಗ್, ಅಬ್ಬೂರು ರಾಜಶೇಖರ್, ವಿಠ್ಠಪ್ಪ ಗೋರಂಟ್ಲಿ, ರಾಮದೇವ ರಾಕೆ

ಸಮಾಜ ಸೇವೆ:

ಮೀರಾ ನಾಯಕ್, ರವೀಂದ್ರನಾಥ್ ಶಾನುಭಾಗ್, ಲೆಫ್ಟಿನೆಂಟ್ ಜನರಲ್ ರಮೇಶ್ ಹಲ್ಗಲಿ

ವಿಜ್ಞಾನ ತಂತ್ರಜ್ಞಾನ:

ಡಾ. ಎಂ.ಆರ್. ಶ್ರೀನಿವಾಸನ್ (ಅಣುಶಕ್ತಿ ಸಂಶೋಧನೆ), ಡಾ. ಮುನಿವೆಂಕಟಪ್ಪ ನಂಜಪ್ಪ(ಸಸ್ಯಶಾಸ್ತ್ರ ಸಂಶೋಧನೆ)

ವೈದ್ಯಕೀಯ: ಡಾ. ಲೀಲಾವತಿ ದೇವದಾಸ್

ಕ್ರೀಡೆ : ಎಲ್: ಶೇಖರ್ ನಾಯಕ್ (ಅಂಧರ ಕ್ರಿಕೆಟ್), ವಿ.ಆರ್. ರಘುನಾಥ್ (ಹಾಕಿ), ಸಹನಾ ಕುಮಾರಿ(ಎತ್ತರ ಜಿಗಿತ)

ಶಿಕ್ಷಣ:  ಡಾ. ಪಿ. ಶ್ಯಾಮರಾಜು

ಇಂಜಿನಿಯರಿಂಗ್: ಬಿ.ಎ. ರೆಡ್ಡಿ

ಹೊರನಾಡು: ರೋನಾಲ್ಡ್ ಕೊಲಾಸೋ (ದುಬೈ)

ಸಂಘಸಂಸ್ಥೆ : ನಾಗನೂರು ವಚನ ಅಧ್ಯಯನ ಕೇಂದ್ರ ಹಾಗೂ ಪ್ರಕಾಶನ

 

Follow Us:
Download App:
  • android
  • ios