ಸ್ಕಾಟ್‌ಲ್ಯಾಂಡಿನ ಎಡಿನ್ಬರ್ಗ್‌ನಲ್ಲಿ ನಡೆದ ಹರಾಜೊಂದರಲ್ಲಿ 60 ವರ್ಷ ಹಳೆಯದಾದ ಮಕಾಲನ್‌ ವಲೇರಿಯೋ ಅಡಾಮಿ ಎಂಬ ಹೆಸರಿನ ವಿಸ್ಕಿ ಬಾಟಲ್‌ ಬರೋಬ್ಬರಿ 7 ಕೋಟಿ ರು.ಗಳಿಗೆ ಮಾರಾಟವಾಗಿದೆ.

ಎಡಿನ್ಬರ್ಗ್‌:  ವಿಸ್ಕಿ ಹಳೆಯದಾದಷ್ಟೂಅದರ ಬೆಲೆ ಜಾಸ್ತಿ. ಸ್ಕಾಟ್‌ಲ್ಯಾಂಡಿನ ಎಡಿನ್ಬರ್ಗ್‌ನಲ್ಲಿ ನಡೆದ ಹರಾಜೊಂದರಲ್ಲಿ 60 ವರ್ಷ ಹಳೆಯದಾದ ಮಕಾಲನ್‌ ಮಕಾಲ್ಲನ್‌ ವಲೇರಿಯೋ ಅಡಾಮಿ ಎಂಬ ಹೆಸರಿನ ವಿಸ್ಕಿ ಬಾಟಲ್‌ ಬರೋಬ್ಬರಿ 7 ಕೋಟಿ ರು.ಗಳಿಗೆ ಮಾರಾಟವಾಗಿದೆ. 

ಈ ಮೂಲಕ ವಿಶ್ವದ ಅತ್ಯಂತ ದುಬಾರಿ ದರಕ್ಕೆ ಮಾರಾಟವಾದ ವಿಸ್ಕಿ ಬಾಟಲ್‌ ಎನಿಸಿಕೊಂಡಿದೆ. ಈ ವಿಸ್ಕಿ ಬಾಟಲ್‌ ಅನ್ನು 1926ರಲ್ಲಿ ಬಟ್ಟಿಇಳಿಸಲಾಗಿತ್ತು. ಬಳಿಕ 1986ರ ವರೆಗೆ ಬಿರಡೆಯನ್ನು ಭದ್ರವಾಗಿ ಮುಚ್ಚಲಾಗಿತ್ತು. 

ಈ ಬ್ಯಾಂಡಿನ 24 ವಿಸ್ಕಿ ಬಾಟಲ್‌ಗಳನ್ನು ಮಾತ್ರ ತಯಾರು ಮಾಡಲಾಗಿದೆ. ಈ ಬ್ಯಾಂಡಿನ ಒಂದು ವಿಸ್ಕಿ ಬಾಟಲಿಯನ್ನು ಕಳೆದ ಮೇ ತಿಂಗಳನಿನಲ್ಲಿ ಹಾಂಗ್‌ಕಾಂಗ್‌ನಲ್ಲಿ ಹರಾಜು ಹಾಕಿದಾಗಳು ಕೋಟಿಗಟ್ಟಲೆ ದರಕ್ಕೆ ಮಾರಾಟವಾಗಿತ್ತು.