ಹೈಫಾ (ನ.27): ಇಸ್ರೇಲಿನ ಹೈಫಾದ ಉತ್ತರ ಭಾಗದಲ್ಲಿ  ಕಾಡ್ಗಿಚ್ಚು  ಆವರಿಸಿದೆ. ಕಾಡ್ಗಿಚ್ಚಿನಿಂದ ನಗರದ ತುಂಬ ಹೊಗೆ ಆವರಿಸಿದ್ದು ಬಹುತೇಕ ಮನೆಗಳು ಬೆಂಕಿಗೆ ಆಹುತಿಯಾಗಿವೆ.

ಸುಮಾರು 60 ಸಾವಿರ ನಾಗರಿಕರು ಕಾಡ್ಗಿಚ್ಚಿನಿಂದಾಗಿ ನಿರಾಶ್ರಿತರಾಗಿದ್ದಾರೆ. ಕಾಡ್ಗಿಚ್ಚಿನಿಂದ ಹೈಫಾ ನಗರದ ಸುತ್ತ ಮುತ್ತ ಹೊಗೆ ಆವರಿಸಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. 

ಆದರೂ ಇನ್ನು ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಇನ್ನು ಹೈಫಾ ಹಾಗೂ ಟೆಲ್​ ಅವಿವ್​ನ ಪ್ರಮುಖ ಹೆದ್ದಾರಿಗಳು ಕೂಡ ಬಂದ್​ ಮಾಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್​ ಪ್ರಧಾನಿ ಯಾರಾದರೂ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವುದು ಸಾಬೀತಾದಲ್ಲಿ ಅವರದ ವಿರುದ್ಧ ಭಯೋತ್ಪಾದನೆ ಪ್ರಕರಣ ದಾಖಲಿಸಲಾಗುವುದು ಎಂದಿದ್ದಾರೆ.

ಜೊತೆಗೆ ಕಾಡ್ಗಿಚ್ಚಿನ ಹಿಂದೆ ಅಲ್​-ಕೈದಾ​ ಭಯೋತ್ಪಾದನೆ ಸಂಘಟನೆ ಕೈವಾಡ ಇರುವ ಆರೋಪ ಕೇಳಿಬಂದಿದೆ. ಪೊಲೀಸರು ಕೂಡ ತನಿಖೆ ನಡೆಸಿ ಈವರೆಗೆ 10 ಮಂದಿ ಆರೋಪಿಗಳನ್ನ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.