ಅಗ್ಗದ ದರಕ್ಕೆ ಇಂಟರ್ನೆಟ್ ಸೇವೆ ಒದಗಿಸುವ ಮೂಲಕ ಮೊಬೈಲ್ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಿದ್ದ ರಿಲಯನ್ಸ ಜಿಯೋ ಸಂಸ್ಥೆ ಇದೀಗ ಮೊಬೈಲ್ ಫೋನ್ ಮಾರಾಟದಲ್ಲೂ ಹೊಸ ದಾಖಲೆ ಸ್ಥಾಪಿಸಿದೆ.
ನವದೆಹಲಿ(ಸೆ.02): ಅಗ್ಗದ ದರಕ್ಕೆ ಇಂಟರ್ನೆಟ್ ಸೇವೆ ಒದಗಿಸುವ ಮೂಲಕ ಮೊಬೈಲ್ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಿದ್ದ ರಿಲಯನ್ಸ ಜಿಯೋ ಸಂಸ್ಥೆ ಇದೀಗ ಮೊಬೈಲ್ ಫೋನ್ ಮಾರಾಟದಲ್ಲೂ ಹೊಸ ದಾಖಲೆ ಸ್ಥಾಪಿಸಿದೆ.
ಕಂಪನಿ ಇತ್ತೀಚೆಗೆ ಜಾರಿಗೆ ತಂದಿದ್ದ ಅಗ್ಗದ ದರದ ಮೊಬೈಲ್ ಫೋನ್‌ಗಳ ಮಾರಾಟಕ್ಕೆ ಗ್ರಾಹಕರಿಂದ ಅಭೂತಪೂರ್ವ ಪ್ರತಿಕ್ರಿಯಯೆ ವ್ಯಕ್ತವಾಗಿದ್ದು ಕೇವಲ 3 ದಿನದಲ್ಲಿ 60 ಲಕ್ಷ ಮೊಬೈಲ್ ಫೋನ್ ಬುಕ್ ಮಾಡಲಾಗಿದೆ. ಆ.24ರಂದು ಜಿಯೋ ಫೋನ್ ಬುಕಿಂಗ್ ಆರಂಭವಾದ ಬಳಿಕ ಮೂರು ದಿನದಲ್ಲಿ 60 ಲಕ್ಷ ಫೋನ್'ಗಳು ಬುಕ್ ಆಗಿದೆ.
ಫೋನ್'ಗಳ ವಿತರಣೆ ನವರಾತ್ರಿ ವೇಳೆಯಲ್ಲಿ ಸೆ.21ರಿಂದ ಆರಂಭವಾಗಲಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. 500 ರು. ಮುಂಗಡ ಹಣ ನೀಡಿ ಫೋನ್ ಬುಕ್ ಮಾಡಲು ಸೆ.24ರಿಂದ ಅವಕಾಶ ಕಲ್ಪಿಸಲಾಗಿತ್ತು.
ಫೋನ್ ಪಡೆದ ಬಳಿಕ ಗ್ರಾಹಕರು 1000 ರು. ಪಾವತಿಸಬೇಕು. ಒಂದು ವೇಳೆ 3 ವರ್ಷದ ಬಳಿಕ ಗ್ರಾಹಕರಿಗೆ ಮೊಬೈಲ್ ಬೇಡ ಎಂದಾದಲ್ಲಿ ಕಂಪನಿ ಪೂರ್ತಿ ಹಣ ಮರು ಪಾವತಿ ಮಾಡಲಿದೆ.
