ನವದೆಹಲಿ(ಮೇ.30): ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯದೊಂದಿಗೆ ಇಡೀ ವಿಶ್ವದ ಗಮನ ಸೆಳೆದಿರುವ ನರೇಂದ್ರ ಮೋದಿ, ದೇಶದ 15ನೇ ಪ್ರಧಾನಮಂತ್ರಿಯಾಗಿ ಇಂದು [ ಅಧಿಕಾರ ಸ್ವೀಕರಿಸಿದರು. 

ಈಶ್ವರನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಪ್ರಧಾನಿ ಮೋದಿ, ಸಂವಿಧಾನಬದ್ಧವಾಗಿ ದೇಶವನ್ನು ಮುನ್ನಡೆಸುವ ವಾಗ್ದಾನ ಮಾಡಿದರು. ಇದೇ ವೇಳೆ ಕ್ಯಾಬಿನೆಟ್, ರಾಜ್ಯ ಖಾತೆ ಸೇರಿದಂತೆ ಒಟ್ಟು 58 ಜನರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 

ಮೋದಿ ಜೊತೆ ಪ್ರಮಾಣವಚನ ಸ್ವೀಕರಿಸಿದವರು: ಟೀಂ ಮೋದಿ ಡಿಟೇಲ್ಸ್!

25 ಕ್ಯಾಬಿನೆಟ್, 9 ಸ್ವತಂತ್ರ ರಾಜ್ಯ ಖಾತೆ ಹಾಗೂ 24 ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಒಟ್ಟು 58 ಸಚಿವರ ಪೈಕಿ  6 ಮಹಿಳೆಯರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ..

ಮೋದಿ ಟೀಂನಲ್ಲಿ ಸ್ಥಾನ ಗಿಟ್ಟಿಸಿಕೊಂಡ ಮಹಿಳೆಯರು

#1 ನಿರ್ಮಲಾ ಸೀತಾರಾಮನ್

2008ರಲ್ಲಿ  ಬಿಜೆಪಿಗೆ ಸೇರ್ಪಡೆಯಾಗಿದ್ದ ನಿರ್ಮಲಾ ಸೀತಾರಾಮನ್ ಅವರು  2014 ರಲ್ಲಿ ನರೇಂದ್ರ ಮೋದಿ ಕ್ಯಾಬಿನೆಟ್ ನಲ್ಲಿ ಸಚಿವ ಸ್ಥಾನ 
2014 ರ ಜೂನ್ ನಲ್ಲಿ ಮೊದಲ ಬಾರಿಗೆ ಆಂಧ್ರಪ್ರದೇಶದಿಂದ ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ನಂತರ  2017ರಲ್ಲಿ ಕರ್ನಾಟಕ ರಾಜ್ಯಸಭೆದಿಂದ ಆಯ್ಕೆಯಾಗಿ ಕೇಂದ್ರ ರಕ್ಷಣಾ ಸಚಿವೆಯಾಗಿದ್ದದ್ದರು. ಇದೀಗ ಮತ್ತೊಮ್ಮೆ ಮೋದಿ ಕ್ಯಾಬಿನೆಟ್ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

#2 ಸ್ಮೃತಿ ಇರಾನಿ

2011ರ ಅಗಸ್ಟ್ ನಲ್ಲಿ ಗುಜರಾತ್ ನಿಂದ ರಾಜ್ಯಸಭೆ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ನಂತರ 2014ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಅವರ ವಿರುದ್ಧ ಸೋಲುಕಂಡಿದ್ದರು. ಇನ್ನು 2014ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆಯಾಗಿದ್ದರು. ಬಳಿಕ 2017ರ ಜುಲೈನಲ್ಲಿ  ಸಂಪುಟ ಪುನಾರಚನೆ ವೇಳೆ ಸ್ಮೃತಿ ಇರಾನಿ ಅವರಿಗೆ ಜವಳಿ ಖಾತೆ ನೀಡಲಾಗಿತ್ತು. ಈ ಬಾರಿ 2019 ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸೋಲಿಸಿ ಸಂಸತ್ ಪ್ರವೇಶಿಸಿದ ಸ್ಮೃತಿ ಇರಾನಿ ಇಂದು ಮತ್ತೊಮ್ಮೆ ಮೋದಿ ಕ್ಯಾಬಿನೆಟ್ ಸೇರಿದರು.

#3 ಸಾಧ್ವಿ ನಿರಂಜನ ಜ್ಯೋತಿ

ಉತ್ತರ ಪ್ರದೇಶದ ಪತೇಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಾಧ್ವಿ ನಿರಂಜನ ಜ್ಯೋತಿ ಅವರು ಬಿಎಸ್ ಪಿ ಅಭ್ಯರ್ಥಿ ಸುಖದೇವ್ ವರ್ಮಾ ಅವರ ವಿರುದ್ಧ ಗೆಲುವು ಸಾಧಿಸಿದ್ದು, ಇಂದು ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

#4 ಹರ್‌ಸಿಮ್ರತ್ ಕೌರ್ ಬಾದಲ್ 

ಶಿರೋಮಣಿ ಅಕಾಲಿ ದಳ (ಎಸ್‌ಎಡಿ)ದ ಪ್ರಭಾವಿ ನಾಯಕಿ ಹರ್‌ಸಿಮ್ರತ್‌ ಕೌರ್‌ ಬಾದಲ್‌ ಮೂರನೇ ಬಾರಿಗೆ ಲೋಕಸಭೆಗೆ ಪ್ರವೇಶಿಸಿದ್ದು,  ಇಂದು ರಾಜ್ಯ ಖಾತೆ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

#5 ರೇಣುಕಾ ಸಿಂಗ್ ಸರೂಟ
ರೇಣುಕಾ ಸಿಂಗ್ ಸರೂಟ ಅವರು ಛತ್ತೀಸ್ ಗಢದ ಸರ್ಬುಜಾ ಲೋಕಸಭಾ ಕ್ಷೇತ್ರದಿಂದ ಸಂಸತ್ ಗೆ ಪ್ರವೇಶಿಸಿದ್ದು, ಇಂದು   ರಾಜ್ಯ ಖಾತೆ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

#6 ದೇವಶ್ರೀ ಚೌಧರಿ
ಪಶ್ಚಿಮ ಬಂಗಾಳದ ಪುರುಲಿಯಾ ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ದೇವಶ್ರೀ ಚೌಧರಿ ಅವರು ಮೋದಿ ಸರ್ಕಾರದಲ್ಲಿ ರಾಜ್ಯ ಖಾತೆ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು.