ಥಾಯ್ಲೆಂಡ್ ಗುಹೆಯಿಂದ ಆರು ಬಾಲಕರು ಹೊರಕ್ಕೆಬಾಲಕರನ್ನು ಸುರಕ್ಷಿತವಾಗಿ ಹೊರ ತೆಗೆದ ರಕ್ಷಣಾ ಸಿಬ್ಬಂದಿಗುಹೆಯಲ್ಲಿ ಇನ್ನೂ ಆರು ಬಾಲಕರು, ಓರ್ವ ಕೋಚ್ಭರದಿಂದ ಸಾಗಿದೆ ರಕ್ಷಣಾ ಕಾರ್ಯಾಚರಣೆ

ಬ್ಯಾಂಕಾಕ್(ಜು.8): ಮಹತ್ವದ ಬೆಳವಣಿಗೆಯೊಂದರಲ್ಲಿ ಥಾಯ್ಲೆಂಡ್ ನ ಗುಹೆಯೊಂದರಲ್ಲಿ ಸಿಲುಕಿರುವ ಫುಟ್ಬಾಲ್ ಆಟಗಾರರ ಪೈಕಿ ಆರು ಬಾಲಕರನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ಹೊರತೆಗೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನುರಿತ ಈಜುಗಾರರ ಸಹಾಯದಿಂದ ಮಕ್ಕಳನ್ನು ರಕ್ಷಿಸುವ ಕಾರ್ಯಾಚರಣೆ ಕಳೆದ 10 ದಿನಗಳಿಂದಲೂ ನಡೆಯುತ್ತಿದೆ. ದೇಶಿ ಮತ್ತು ವಿದೇಶಿ ನುರಿತ ತಂತ್ರಜ್ಞರು ನಿರಂತರವಾಗಿ ಪ್ರಯತ್ನ ನಡೆಸಿ ಆರು ಬಾಲಕರನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ರಕ್ಷಿಸಲ್ಪಟ್ಟ ಆರು ಬಾಲಕರು ತುಂಬ ಬಳಲಿದ್ದು, ಕುಡಲೇ ಆವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗುಹೆಯಲ್ಲಿ ಇನ್ನೂ ಆರು ಬಾಲಕರು ಮತ್ತು ಓರ್ವ ಕೋಚ್ ಸಿಲುಕಿಕೊಂಡಿದ್ದು, ಅವರನ್ನು ಹೊರತೆಗೆಯಲು ರಕ್ಷಣಾ ಕಾರ್ಯ ಭರದಿಂದ ಸಾಗಿದೆ.